Home ಧಾರ್ಮಿಕ ಸುದ್ದಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ: ಮಹಾರುದ್ರಹೋಮ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ: ಮಹಾರುದ್ರಹೋಮ

1191
0
SHARE

ಮಹಾನಗರ: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವರ್ಷಾವಧಿ ಉತ್ಸವ-ಶಿವರಾತ್ರಿ ಮಹೋತ್ಸವ ಅಂಗವಾಗಿ ರವಿವಾರ ಮಹಾರುದ್ರಹೋಮ, ಹಗಲೋತ್ಸವ ಬಲಿ ವೈಭವದಿಂದ ನಡೆಯಿತು. ಬೆಳಗ್ಗೆ 8.15ಕ್ಕೆ ಮಹಾರುದ್ರಹೋಮ ಆರಂಭವಾಗಿ ಪೂರ್ಣಾಹುತಿ ನಡೆಯಿತು. ಬಳಿಕ ಹಗಲೋತ್ಸವ ಬಲಿ ನಡೆದು,ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ಕುದ್ರೋಳಿ ದೇವಸ್ಥಾನದ ಅಭಿ ವೃದ್ಧಿಯ ರೂವಾರಿ ಜನಾರ್ದನ ಪೂಜಾರಿ, ಮಾಲತಿ ಜನಾರ್ದನ ಪೂಜಾರಿ, ದೇಗುಲದ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಂ, ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್‌ ಆರ್‌., ರವಿಶಂಕರ್‌ ಮಿಜಾರ್‌, ಡಿ.ಡಿ. ಕಟ್ಟೆಮಾರ್‌, ಮಹೇಶ್ಚಂದ್ರ, ದೇಗುಲ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಊರ್ಮಿಳಾ ರಮೇಶ್‌ ಕುಮಾರ್‌, ಡಾ| ಬಿ.ಜಿ. ಸುವರ್ಣ, ಡಾ| ಅನಸೂಯಾ, ದೇವೇಂದ್ರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6ರಿಂದ ಸಿಹಾರಿಕ ಬಿ.ಎಂ. ಅವರಿಂದ ವಿನೋದಾವಳಿ, ಸಂಜೆ 6.30ರಿಂದ ರಾಜ್ಯ ಕಲಾಶ್ರೀ ಪ್ರಶಸ್ತಿ ಪಡೆದ ಭೂಮಿಕಾ ಮಧುಸೂದನ್‌ ಅವರಿಂದ ಭಕ್ತಿಭಾವ ಸಂಗೀತ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here