ಮಹಾನಗರ: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಫೆ. 10ರಿಂದ 17ರ ವರೆಗೆ ನಡೆಯುತ್ತಿರುವ ಬ್ರಹ್ಮಕಲಶೋತ್ಸವ ಅಂಗವಾಗಿ ಸೋಮವಾರ ಬೆಳಗ್ಗೆ ಶಿವಗಿರಿ ಮಠಾಧಿಪತಿ ಬ್ರಹ್ಮಶ್ರೀ ವಿಷುದಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಶಿವಗಿರಿ ಮಠದ ಶ್ರೀ ಸುಗುದಾನಂದ ತಂತ್ರಿಯವರ ನೇತೃತ್ವದಲ್ಲಿ ತ್ರಿಕಾಲ ಗುರುಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಬೆಳಗ್ಗೆ ಮಹಾಗಣಪತಿ ಹೋಮ ನಡೆದು ಯಜಮಾನ ಸ್ವಾಗತ, ತ್ರಿಕಾಲ ಗುರುಪೂಜೆ ಆರಂಭವಾಯಿತು. ತ್ರಿಕಾಲ ಅಂಕುರ ಪೂಜೆ, ಭಗವತಿ ಪೂಜೆ, ತೋರಣ ಮುಹೂರ್ತ, ವಿಶ್ವಶಾಂತಿ ಹೋಮ, ಕುಂಡ ಶುದ್ಧಿ, ಮಹಾಪೂಜೆ ನಡೆಯಿತು. ಶಿವಗಿರಿ ಮಠದ ಮನೋಜ್ ಶಾಂತಿ, ಕುದ್ರೋಳಿ ಕ್ಷೇತ್ರದ ಮುಖ್ಯ ಅರ್ಚಕ ಲಕ್ಷ್ಮಣ ಶಾಂತಿ ಪೌರೋಹಿತ್ಯ ವಹಿಸಿದ್ದರು.