Home ಧಾರ್ಮಿಕ ಸುದ್ದಿ ಬ್ರಹ್ಮಕಲಶ‌, ಅತಿರುದ್ರ ಮಹಾಯಾಗ: ಶಿವೋಪಾಸನ ನೃತ್ಯ ವೈವಿಧ್ಯ

ಬ್ರಹ್ಮಕಲಶ‌, ಅತಿರುದ್ರ ಮಹಾಯಾಗ: ಶಿವೋಪಾಸನ ನೃತ್ಯ ವೈವಿಧ್ಯ

ಕೂಡ್ಲು ದೇವರಗುಡ್ಡೆ ಶ್ರೀಶೈಲ ಮಹಾದೇವ ದೇವಸ್ಥಾನ

801
0
SHARE

ವಿದ್ಯಾನಗರ: ಕೂಡ್ಲು ದೇವರಗುಡ್ಡೆ ಶ್ರೀಶೈಲ ಮಹಾದೇವ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ಅತಿರುದ್ರ ಮಹಾ ಯಾಗದ ಪ್ರಯುಕ್ತ ಕಲಾತಪಸ್ವಿ ಬಾಲಕೃಷ್ಣ ಮಾಸ್ಟರ್‌ ನಾಟ್ಯನಿಲಯಂ ಮಂಜೇಶ್ವರ ಅವರ ಶಿಷ್ಯ ವೃಂದದಿಂದ ಶಾಸ್ತ್ರೀಯ, ಜಾನಪದ ನೃತ್ಯ , ಮೋಹಿನಿಯಾಟಂ, ಕೂಚುಪುಡಿಗಳನ್ನೊಳಗೊಂಡ ಶಿವೋಪಾಸನ ನೃತ್ಯ ವೈವಿಧ್ಯ ಕಾರ್ಯಕ್ರಮ ಜರಗಿತು.

ಶ್ರೀಶೈಲೇಶ್ವರ ಮಂಟಪದಲ್ಲಿ ಆಶ್ಲೇಷಾ ಬಲಿ, ಬಿಂಬಶುದ್ಧಿ ಕಲಶಾಭಿಷೇಕ, ಪ್ರಾಯಶ್ಚಿತ್ತ ಹೋಮಗಳು, ಪ್ರೋಕ್ತ ಹೋಮಗಳು, ಅಂಕುರಪೂಜೆ, ರುದ್ರ ಜಪ ಘನಪಾರಾಯಣ, ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here