Home ಧಾರ್ಮಿಕ ಸುದ್ದಿ ಕೊಯ್ಯೂರು ಶ್ರೀ ವನದುರ್ಗಾ ದೇವಾಲಯ ,ಅಷ್ಟಬಂಧ ಬ್ರಹ್ಮಕಲಶೋತ್ಸವ: ಪೂರ್ವಭಾವಿ ಸಭೆ

ಕೊಯ್ಯೂರು ಶ್ರೀ ವನದುರ್ಗಾ ದೇವಾಲಯ ,ಅಷ್ಟಬಂಧ ಬ್ರಹ್ಮಕಲಶೋತ್ಸವ: ಪೂರ್ವಭಾವಿ ಸಭೆ

2129
0
SHARE

ಬೆಳ್ತಂಗಡಿ : ಕೊಯ್ಯೂರು ಶ್ರೀ ವನದುರ್ಗಾ ದೇವಾಲಯದ ಅಷ್ಟಬಂಧ, ಬ್ರಹ್ಮಕಲಶೋತ್ಸವ ನಡೆದು 12 ವರ್ಷಗಳಾಗಿದ್ದು, ಇದೀಗ ಮತ್ತೆ ಅಷ್ಟಬಂಧ ಬ್ರಹ್ಮಕಲಶೋತ್ಸವದ ನಡೆಸುವ ಕುರಿತು ಪೂರ್ವಭಾವಿ ಸಭೆ ದೇವಸ್ಥಾನದ ವಠಾರದಲ್ಲಿ ಆಡಳಿತ ಮೊಕ್ತೇಸರ ಕಾಂತಾಜೆ ಈಶ್ವರ ಭಟ್‌ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಸಭಾಭವನ, ಕೆರೆ ನಿರ್ಮಾಣ, ನೂತನ ಧ್ವಜಸ್ತಂಭ, ಅಂಗಣಕ್ಕೆ ಇಂಟರ್‌ಲಾಕ್‌ ಅಳವಡಿಕೆ, ಶಾಶ್ವತ ಚಪ್ಪರ ನಿರ್ಮಾಣ, ಇತ್ಯಾದಿ ಕೆಲಸಗಳನ್ನು ದಾನಿಗಳ
ಸಹಕಾರದೊಂದಿಗೆ ನಿರ್ಮಿಸುವುದೆಂದು ತೀರ್ಮಾನಿಸಲಾಯಿತು.

2020ರ ಪ್ರಥಮ ತಿಂಗಳಲ್ಲಿ ಬ್ರಹ್ಮಕಲಶೋತ್ಸವ: ತೀರ್ಮಾನ 2020ರ ಪ್ರಥಮ ತಿಂಗಳಲ್ಲಿ ಬ್ರಹ್ಮಕಲಶೋತ್ಸವ ನಡೆಸುವ ತೀರ್ಮಾನಕ್ಕೆ ಬಂದು ಅದರ ಮೊದಲು ದೇವಸ್ಥಾನದಲ್ಲಿ ಸುಮಾರು 1 ಕೋ. ರೂ. ಅಭಿವೃದ್ಧಿ ಕೆಲಸಗಳ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ದೇಗುಲದ ತಂತ್ರಿಗಳಾದ ನಂದಕುಮಾರ್‌, ಅರ್ಚಕ ಅಶೋಕ್‌ ಕುಮಾರ್‌ ಪೆರ್ಮುದೆ, ರವೀಂದ್ರನಾಥ ಗೌಡ, ಉಪನ್ಯಾಸಕ ಮೋಹನ ಗೌಡ, ಗಣೇಶ್‌, ಶ್ರೀಧರ ಗೌಡ ಗುಂಡಿಜಾಲು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here