Home ಧಾರ್ಮಿಕ ಸುದ್ದಿ ಪಾಷಾಣಮೂರ್ತಿ ಅಮ್ಮನವರ ಪ್ರತಿಷ್ಠಾ ದಿನ

ಪಾಷಾಣಮೂರ್ತಿ ಅಮ್ಮನವರ ಪ್ರತಿಷ್ಠಾ ದಿನ

256
0
SHARE

ಅರಂತೋಡು : ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲಕ್ಕೆ ಸಂಬಂಧಿಸಿದ ಶ್ರೀ ಪಾಷಾಣಮೂರ್ತಿ ಅಮ್ಮನವರ ಪ್ರತಿಷ್ಠಾ ದಿನದ ಪ್ರಯುಕ್ತ ಅಮ್ಮನವರ ಗುಡಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.

ದೇಗುಲದ ಪ್ರಧಾನ ಅರ್ಚಕ ಕೇಶವಮೂರ್ತಿ ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು. ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ, ಸದಸ್ಯ ಕೆ.ಕೆ. ಬಾಲಕೃಷ್ಣ ಕುಂಟುಕಾಡು, ಮಾಜಿ ಅಧ್ಯಕ್ಷ ಕಿಶೋರ್‌ ಕುಮಾರ್‌ ಯು.ಎಂ., ಅರಂತೋಡು-ತೊಡಿಕಾನ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಸಂತೋಷ್‌ ಕುತ್ತಮೊಟ್ಟೆ, ತೊಡಿಕಾನ ಶ್ರೀ ಮಲ್ಲಿಕಾರ್ಜುನ ಭಜನ ಸಂಘದ ಅಧ್ಯಕ್ಷ ಜನಾರ್ದನ ಬಾಳೆಕಜೆ, ದೇಗುಲದ ಮ್ಯಾನೇಜರ್‌ ಆನಂದ ಕಲ್ಲಗದ್ದೆ, ದೇಗುಲದ ಸಿಬಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here