Home ಧಾರ್ಮಿಕ ಸುದ್ದಿ ಕೊಯಿಲ: ಧರ್ಮದೈವಗಳ ನೇಮ ನಡಾವಳಿ

ಕೊಯಿಲ: ಧರ್ಮದೈವಗಳ ನೇಮ ನಡಾವಳಿ

2271
0
SHARE

ಬಡಗನ್ನೂರು : ಬಡಗನ್ನೂರು ಗ್ರಾಮದ ಕೊಯಿಲ, ಧೂಮಾವತಿ ಮತ್ತು ಪರಿವಾರ ದೈವಸ್ಥಾನದಲ್ಲಿ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಹಾಗೂ ಧರ್ಮದೈವ ಮತ್ತು ಪರಿವಾರ ದೈವಗಳ ನೇಮ ನಡೆಯಿತು.

ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ಅವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಿದವು.
ಮೇ 6ರಂದು ಸಂಜೆ 7ರಿಂದ ಪುಣ್ಯಾಹವಾಚನ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೊàಘ್ನ ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹಾಂತ ಹೋಮ ಜರಗಿತು.

ಮೇ 7ರಂದು ಬೆಳಗ್ಗೆ 7ರಿಂದ ಗಣಪತಿ ಹೋಮ, ಗೃಹಪ್ರವೇಶ, ಬ್ರಹ್ಮಕಲಶ ಪೂಜೆ, ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ನಿತ್ಯನೈಮಿತ್ತಾದಿಗಳ ನಿರ್ಣಯ, ಪ್ರಸಾದ ವಿತರಣೆ, ಬಳಿಕ ಅನ್ನಸಂತರ್ಪಣೆ ಜರಗಿತು.

ಸಂಜೆ 7ಕ್ಕೆ ಭಂಡಾರ ಇಳಿಸುವುದು. ಅನ್ನಸಂತರ್ಪಣೆ, ಗುಳಿಗ, ಕಲ್ಲುರ್ಟಿ, ಕೊರತಿ, ವರ್ಣರ ಪಂಜುರ್ಲಿ ದೈವಗಳ ನೇಮ. ಮೇ 8ರಂದು ಧರ್ಮದೈವ ಧೂಮಾವತಿ ದೈವದ ನೇಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.ವರ್ಣರ ಪಂಜುರ್ಲಿ, ಧರ್ಮದೈವ ಧೂಮಾವತಿ ದೈವದ ನೇಮ ನಡೆಯಿತು.

LEAVE A REPLY

Please enter your comment!
Please enter your name here