ಕಾಸರಗೋಡು: ಕೋಟೆಕಣಿ ಸಪರಿವಾರ ಶ್ರೀ ಅನ್ನಪೂರ್ಣೇಶ್ವರೀ ಮಹಾಕಾಳಿ ದೇವಸ್ಥಾನದ ತೃತೀಯ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಮಾ. 2ರಂದು ವಿವಿಧ ವೈದಿಕ, ತಾಂತ್ರಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ಕಾರ್ಯಕ್ರಮದ ಅಂಗವಾಗಿ ಮಾ. 2ರಂದು ಬೆಳಗ್ಗೆ ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆದ ಬಳಿಕ ಸಂಜೆ ಗುಳಿಗನ ಕೋಲ ಜರಗಿತು.
ಮಾ. 1ರಂದು ಪೂರ್ವಾಹ್ನ ಸಾಮೂಹಿಕ ಪ್ರಾರ್ಥನೆ ಮತ್ತು ಗಣಪತಿ ಹೋಮ, ಅಧಿವಾಸ ಹೋಮ, 25 ಸಾನ್ನಿಧ್ಯ ಕಲಶ ಪ್ರತಿಷ್ಠೆ, ವೃಷಭ ಲಗ್ನ ಮುಹೂರ್ತದಲ್ಲಿ ಕಲಶಾಭಿಷೇಕ, ಮಹಾಪೂಜೆ, ಶ್ರೀ ದೇವಿಯ ದರ್ಶನ, ಪ್ರಸಾದ ವಿತರಣೆ, ಅನ್ನದಾನ, ಮಧ್ಯಾಹ್ನ ಶ್ರೀ ಬೊಡ್ಡಜ್ಜ ಯಕ್ಷಭಾರತಿ ಮಧೂರು ಅವರಿಂದ ಯಕ್ಷಗಾನ ಕೂಟ, ಸಂಜೆ ದೀಪ ಪ್ರತಿಷ್ಠೆ, ಶ್ರೀ ಅನ್ನಪೂರ್ಣೇಶ್ವರೀ ಭಜನಾ ಸಂಘ ಕೋಟೆಕಣಿ ಇವರಿಂದ ಭಜನೆ, ರಾತ್ರಿ ಮಹಾಪೂಜೆ, ಶ್ರೀ ದೇವಿಯ ದಿವ್ಯ ದರ್ಶನ ಹಾಗೂ ಮಹಾಸರ್ವಾಲಂಕಾರ ಪೂಜೆ, ಪ್ರಸಾದ ವಿತರಣೆ, ಅನ್ನದಾನ, ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.