Home ಧಾರ್ಮಿಕ ಸುದ್ದಿ ಕೋಟೆಬಾಗಿಲು ವೀರಮಾರುತಿ ದೇವಸ್ಥಾನ: ವಾರ್ಷಿಕ ಜಾತ್ರೆ, ವಿವಿಧ ಕೊಡುಗೆ ಸಮರ್ಪಣೆ

ಕೋಟೆಬಾಗಿಲು ವೀರಮಾರುತಿ ದೇವಸ್ಥಾನ: ವಾರ್ಷಿಕ ಜಾತ್ರೆ, ವಿವಿಧ ಕೊಡುಗೆ ಸಮರ್ಪಣೆ

776
0
SHARE

ಮೂಡುಬಿದಿರೆ: ಕೋಟೆ ಬಾಗಿಲು ಶ್ರೀ ವೀರಮಾರುತಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ ಬ್ರಹ್ಮಶ್ರೀ ಎಡಪದವು ವೆಂಕಟೇಶ ತಂತ್ರಿಗಳ ನೇತೃತ್ವದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ದತ್ತಾತ್ರೇಯ ಭಟ್ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

ಬೆಳಗ್ಗೆ ನಾಗದೇವರಿಗೆ ಪಂಚಾಮೃತ ಅಭಿಷೇಕ, ಗಣಪತಿ ದೇವರಿಗೆ ಗಣಹೋಮ, ಕ್ಷೇತ್ರದಲ್ಲಿ ನವಕ ಹೋಮ, ವಾಯುಸ್ತುತಿ ಪುನಶ್ಚರಣ ಸಾನ್ನಿಧ್ಯ ಕಲಶಾಭಿಷೇಕ ಹಾಗೂ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ದುರ್ಗಾಪೂಜೆ, ಮಧ್ಯಾಹ್ನ ಪಲ್ಲಕಿ ಉತ್ಸವ, ಮಹಾಪೂಜೆ ಜರಗಿತು.

ಸಂಜೆ ಸಾಮೂಹಿಕ ಸತ್ಯನಾರಾಯಣ ಪೂಜೆ, ಭಜನೆ, ರಾತ್ರಿ ವಿಶೇಷ ರಂಗಪೂಜೆ, ಬಲಿ ಉತ್ಸವ ನಡೆದವು.

ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಶ್ಯಾಮ ಹೆಗ್ಡೆ, ಕಾರ್ಯದರ್ಶಿ ಶೇಖರ್‌ ಹೆಗ್ಡೆ, ಮಾಜಿ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ, ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ, ಕಾರ್ಯದರ್ಶಿ ಪ್ರಣಿಲ್ ಹೆಗ್ಡೆ, ಮಾಜಿ ಅಧ್ಯಕ್ಷ ಉದಯ ಹೆಗ್ಡೆ, ಮಹಿಳಾ ಸಂಘದ ಅಧ್ಯಕ್ಷೆ ಪೂರ್ಣಿಮಾ ಎಂ. ಹೆಗ್ಡೆ, ಕಾರ್ಯದರ್ಶಿ ಉಷಾ ಕೆ. ಹೆಗ್ಡೆ, ಮುಂಬಯಿ ಹೆಗ್ಗಡೆ ಸಂಘದ ಅಧ್ಯಕ್ಷ ವಿಜಯ್‌ ಬಿ. ಹೆಗ್ಡೆ, ಡಾ| ಸುರೇಂದ್ರ ಕುಮಾರ್‌ ಹೆಗ್ಡೆ ಮುಂಬಯಿ, ಬೆಂಗಳೂರು ಹೆಗ್ಗಡೆ ಸಂಘದ ಉಪಾಧ್ಯಕ್ಷ ಸದಾಶಿವ ಹೆಗ್ಡೆ ದಾನಿಗಳಾದ ರಾಮಚಂದ್ರ ಹೆಗ್ಡೆ, ಪ್ರಭಾಕರ ಹೆಗ್ಡೆ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

ಹೆಗ್ಗಡೆ ಸಮಾಜ ಬಾಂಧವರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ಸಂದರ್ಭ ನೂತನ ಕಚೇರಿಯನ್ನು ವೇಣೂರು ಪರಾರಿ ದಿ| ಗುಣಾನಂದ ಹೆಗ್ಡೆ ಸ್ಮರಣಾರ್ಥ ಪತ್ನಿ ಮತ್ತು ಪುತ್ರಿ, ನೂತನ ಜನರೇಟರ್‌ನ್ನು ಮೂಡುಬಿದಿರೆ ಸಾಯಿ ಅನುರಾಮ ದಿ| ರುಕ್ಮಯ್ಯ ಹೆಗ್ಡೆ-ಅಪ್ಪಿ ಹೆಗ್ಡೆ ಸ್ಮರಣಾರ್ಥ ಅವ‌ರು ಮಕ್ಕಳು ಹಾಗೂ ಪೆಲಕುಂಜ ದಿ| ಅಣ್ಣಯ್ಯ ಹೆಗ್ಡೆ -ಗುಲಾಬಿ ದಂಪತಿ ಸ್ಮರಣಾರ್ಥ ಅವರ ಮಕ್ಕಳು ಸೇವಾರೂಪದಲ್ಲಿ ಕ್ಷೇತ್ರಕ್ಕೆ ಸಲ್ಲಿಸಿದರು.

ವಿವಿಧ ಕೊಡುಗೆ ಸಮರ್ಪಣೆ
ಈ ಸಂದರ್ಭ ನೂತನ ಕಚೇರಿಯನ್ನು ವೇಣೂರು ಪರಾರಿ ದಿ| ಗುಣಾನಂದ ಹೆಗ್ಡೆ ಸ್ಮರಣಾರ್ಥ ಪತ್ನಿ ಮತ್ತು ಪುತ್ರಿ, ನೂತನ ಜನರೇಟರ್‌ನ್ನು ಮೂಡುಬಿದಿರೆ ಸಾಯಿ ಅನುರಾಮ ದಿ| ರುಕ್ಮಯ್ಯ ಹೆಗ್ಡೆ-ಅಪ್ಪಿ ಹೆಗ್ಡೆ ಸ್ಮರಣಾರ್ಥ ಅವ‌ರು ಮಕ್ಕಳು ಹಾಗೂ ಪೆಲಕುಂಜ ದಿ| ಅಣ್ಣಯ್ಯ ಹೆಗ್ಡೆ -ಗುಲಾಬಿ ದಂಪತಿ ಸ್ಮರಣಾರ್ಥ ಅವರ ಮಕ್ಕಳು ಸೇವಾರೂಪದಲ್ಲಿ ಕ್ಷೇತ್ರಕ್ಕೆ ಸಲ್ಲಿಸಿದರು.

LEAVE A REPLY

Please enter your comment!
Please enter your name here