Home ಧಾರ್ಮಿಕ ಸುದ್ದಿ ಕೋಟಿ ತೀರ್ಥ ಪುಷ್ಕರಿಣಿಗೆ ಕೊಡಿ ಹಬ್ಬದಂದು ಅಕ್ಕಿ ಸೇವೆ

ಕೋಟಿ ತೀರ್ಥ ಪುಷ್ಕರಿಣಿಗೆ ಕೊಡಿ ಹಬ್ಬದಂದು ಅಕ್ಕಿ ಸೇವೆ

150
0
SHARE

ಡಾ| ಸುಧಾಕರ ನಂಬಿಯಾರ್‌
ಕೋಟೇಶ್ವರ
: 800 ವರ್ಷಗಳ ಇತಿಹಾಸ ಹೊಂದಿರುವ ರಾಜ್ಯದ ಅತೀ ದೊಡ್ಡ ಪುಷ್ಕರಿಣಿ ಎಂಬ ಹೆಗ್ಗಳಿಕೆ ಹೊಂದಿರುವ ಶ್ರೀಕೋಟಿಲಿಂಗೇಶ್ವರ ದೇಗುಲದ ಕೋಟಿ ತೀರ್ಥ ಪುಷ್ಕರಿಣಿ ಕೊಡಿ ಹಬ್ಬದಂದು ಭಕ್ತರ ಪಾಲಿಗೆ ಧ್ಯಾನ ಹಾಗೂ ಇಷ್ಟಾರ್ಥ ಪ್ರಾಪ್ತ ಸ್ಥಾನವಾಗಿ ಪವಿತ್ರ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ. ಕೊಡಿ ಹಬ್ಬದಂದು ಸಹಸ್ರಾರು ಭಕ್ತರು ಕೆರೆಯ ಸುತ್ತಲೂ ಅಕ್ಕಿ ಕಾಳನ್ನು ಚೆಲ್ಲುತ್ತಾ ಒಂದು ಸುತ್ತು ಬರುವ ಪರಂಪರೆ ಇಂದಿಗೂ ನಡೆಯುತ್ತಾ ಬಂದಿದೆ.

ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನೂತನ ವಧೂವರರು ಈ ಪುಷ್ಕರಿಣಿಯಲ್ಲಿ ಮಿಂದು ಸಾಗುವ ಪರಿಪಾಠಕ್ಕೊಂದು ಧಾರ್ಮಿಕ ಹಿನ್ನೆಲೆ ಹೊಂದಿದೆ. ಧ್ವಜಾರೋಹಣದ ಮಹತ್ವ ದೇಗುಲದಲ್ಲಿ ನಡೆಯುವ ಧ್ವಜಾರೋಹಣಕ್ಕೆ ಗ್ರಾಮೀಣ ಭಾಷೆಯಲ್ಲಿ ಗರಣ ಕಟ್ಟುವುದು ಅನ್ನುವುದು ವಾಡಿಕೆ ಮಾತು ಇದಕ್ಕೆ ವಿಶೇಷ ಮಹತ್ವವಿದ್ದು ದೇಗುಲದಲ್ಲಿ ಗರಣ ಕಟ್ಟಿದ ಅನಂತರ ಗ್ರಾಮಸ್ಥರು ಊರುಬಿಟ್ಟು ಹೋಗಬಾರದು ತುರ್ತು ಕಾರ್ಯ ನಿಮಿತ್ತ ಇತರ ರಾಜ್ಯಗಳಿಗೆ ತೆರಳಿದ್ದರೂ ಕೊಡಿ ಹಬ್ಬದ ದಿನದಂದು ಊರಲ್ಲಿ ಇರಬೇಕು ಎಂಬ ನಂಬಿಕೆಯ ಪರಂಪರೆ ಇಂದಿಗೂ ನಡೆದುಕೊಂಡು ಬಂದಿದೆ.

ಒಳ ಸುರಂಗ
ವಂಡಾರು ಕಂಬಳದ ಸಂದರ್ಭದಲ್ಲಿ ಇಲ್ಲಿನ ಕೋಟಿ ತೀರ್ಥ ಪುಷ್ಕರಿಣಿಯ ನೀರು ಕೆಸರು ಮಯ ವಾಗುತ್ತಿರುವುದು ಹಿಂದಿನವರ ಮಾತಿಗೆ ಒತ್ತು ನೀಡಿದೆ. ಒಳ ಸುರಂಗ ವ್ಯವಸ್ಥೆಯು ವಂಡಾರಿನಿಂದ ಕೋಟೇಶ್ವರ ತನಕ ಹೊಂದಿರುವುದು ಇತಿಹಾಸವನ್ನು ಮೆಲುಕು ಹಾಕುವಂತಿದೆ. ಈ ಕೆರೆಯಲ್ಲಿ 18 ನದಿಗಳ ಸಂಗಮವಿದೆ. ಇದಕ್ಕೆ ಕೋಟಿ ತೀರ್ಥ ಹಾಗೂ ಬ್ರಹ್ಮ ತೀರ್ಥವೆಂಬ ಹೆಸರಿದೆ.

1400 ವರ್ಷಗಳ ಇತಿಹಾಸ ಹೊಂದಿರುವ ಕೋಟೇಶ್ವರದ ಕೊಡಿ ಹಬ್ಬ ಉಡುಪಿ ಜಿಲ್ಲೆಗೆ ಹೆಸರುವಾಸಿ. ಇಲ್ಲಿನ ವಿಶೇಷ ರಥ, ತಟ್ಟಿರಾಯ, ಸರ್ವಧರ್ಮಗಳ ಸಮನ್ವಯತೆ ಧಾರ್ಮಿಕ ಪರಂಪರೆಯ ವಿಶೇಷತೆ. 14 ಗ್ರಾಮಗಳ ನಂಬಿದ ಭಕ್ತರ ಸಿದ್ಧಿ ಕ್ಷೇತ್ರವಾಗಿದೆ.

LEAVE A REPLY

Please enter your comment!
Please enter your name here