ಕೋಟೇಶ್ವರ : ಇಲ್ಲಿನ ಶ್ರೀಕೋಟಿಲಿಂಗೇಶ್ವರ ದೇಗುಲದಲ್ಲಿ ಡಿ. 12ರಂದು ನಡೆಯಲಿರುವ ಜಾತ್ರೆ “ಕೊಡಿ ಹಬ್ಬ’ ದ ಅಂಗವಾಗಿ ಡಿ. 6ರಂದು ದೇಗುಲದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಡನೆ ಧ್ವಜಾರೋಹಣ ನಡೆಯಿತು.
ಪ್ರಧಾನ ತಂತ್ರಿ ಪ್ರಸನ್ನ ಕುಮಾರ ಐತಾಳ್ ಅವರ ನೇತೃತ್ವದಲ್ಲಿ ಪೂಜೆಯ ಅನಂತರ ಧ್ವಜಾರೋಹಣ ಕಾರ್ಯ ನಡೆಯಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಮಾಜಿ ಆಡಳಿತ ಧರ್ಮದರ್ಶಿ ಪ್ರಭಾಕರ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣದೇವ ಕಾರಂತ, ಬಿ. ಹಿರಿಯಣ್ಣ, ವ್ಯವಸ್ಥಾಪನ ಸಮಿತಿ ಸದಸ್ಯರು ಮಾಜಿ ಸದಸ್ಯರು ಸಹಿತ ಗ್ರಾಮಸ್ಥರು ಉಪಸ್ಥಿತರಿದ್ದರು.
ಡಿ. 7ರಂದು ಪನ್ನಗ ವಾಹನೋತ್ಸವ, ಡಿ. 8ರಂದು ವೃಷಭವಾಹನೋತ್ಸವ, ಡಿ. 9ರಂದು ಕುಂಜರವಾಹನೋತ್ಸವ, ಡಿ. 10ರಂದು ಅಶ್ವವಾಹನೋತ್ಸವ, ಡಿ. 11ರಂದು ಸಿಂಹವಾಹನೋತ್ಸವ ನಡೆಯಲಿದ್ದು, ಡಿ. 12ರಂದು ರಥೋತ್ಸವ ನಡೆಯಲಿದೆ.