Home ಧಾರ್ಮಿಕ ಸುದ್ದಿ ಕೋಟ ಶ್ರೀ ಕಾಶೀಮಠದಲ್ಲಿ ಚಾತುರ್ಮಾಸ್ಯ, ಸಂಯಮೀಂದ್ರತೀರ್ಥರ ಆಗಮನ

ಕೋಟ ಶ್ರೀ ಕಾಶೀಮಠದಲ್ಲಿ ಚಾತುರ್ಮಾಸ್ಯ, ಸಂಯಮೀಂದ್ರತೀರ್ಥರ ಆಗಮನ

1352
0
SHARE

ಕೋಟ: ಕೋಟದ ಶ್ರೀಕಾಶೀ ಮಠದ ಮುರಲೀಧರ ಕೃಷ್ಣ ಮುಖ್ಯಪ್ರಾಣ ದೇವಸ್ಥಾನದಲ್ಲಿ ಶ್ರೀಕಾಶೀ ಮಠಾಧಿಧೀಶ ಶ್ರೀಮದ್‌ ಸಂಯಮೀಂದ್ರತೀರ್ಥ ಸ್ವಾಮೀಜಿಯವರು ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳಲಿದ್ದು, ಜು.11ರಂದು ಕೋಟ ಪುರಪ್ರವೇಶಗೈದರು.

ಗುರುವಾರ ಸಂಜೆ ಮುನಿಯಾಲು ವೆಂಕಟರಮಣ ದೇವಸ್ಥಾನದ ಮೊಕ್ಕಾಂನಿಂದ ಆಗಮಿಸಿದ ಸ್ವಾಮೀಜಿಯವರನ್ನು ಕೋಟದ ಹಿರೇಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. ಅನಂತರ ಪೂರ್ಣಕುಂಭ ಸ್ವಾಗತ, ವೈಭವದ ಮೆರವಣಿಗೆಯಲ್ಲಿ ಕಾಶೀಮಠಕ್ಕೆ ಕರೆತರಲಾಯಿತು.

ಸಮಾಜ ಬಾಂಧವರು ವೇದ ಘೋಷ, ಭಜನೆಯೊಂದಿಗೆ ಸಾಗಿಬಂದರು. ಈ ಸಂದರ್ಭದಲ್ಲಿ ದೇಗುಲದ ಮೊಕ್ತೇಸರರು, ಅರ್ಚಕರು ಮತ್ತು ಊರ ಪರವೂರ ಸಮಾಜ ಬಾಂಧವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here