Home ಧಾರ್ಮಿಕ ಸುದ್ದಿ ‘ಚಾತುರ್ಮಾಸ್ಯ ಆಚರಣೆ ಸಮಾಜದ ಶ್ರೇಯೋಭಿವೃದ್ಧಿಗೆ’

‘ಚಾತುರ್ಮಾಸ್ಯ ಆಚರಣೆ ಸಮಾಜದ ಶ್ರೇಯೋಭಿವೃದ್ಧಿಗೆ’

ಕೋಟ ಕಾಶೀಮಠ; ಚಾತುರ್ಮಾಸ್ಯ ಸಭೆ

398
0
SHARE

ಕೋಟ: ಚಾತುರ್ಮಾಸ್ಯ ವ್ರತಾಚರಣೆ ಧರ್ಮ ಸಂಸ್ಥಾಪನೆಗೆ ಮತ್ತು ಸಮಾಜದ ಉದ್ಧಾರಕ್ಕಾಗಿ. ಈ ವ್ರತಾಚರಣೆಯಲ್ಲಿ ಸಮಾಜ ಬಾಂಧವರು ಆಬಾಲವೃದ್ಧರಾಗಿ ಸಕ್ರಿಯವಾಗಿ ಭಾಗವಹಿಸಿ ಹರಿ ಗುರುಗಳ ಕೃಪೆಗೆ ಪಾತ್ರರಾಗಬೇಕು. ಈ ಸಮಯದಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇವು ಸರ್ವರನ್ನು ಒಗ್ಗೂಡಿಸಿ ವಿಜೃಂಭಣೆಯಿಂದ ನಡೆಯಲಿ ಎಂದು ಶ್ರೀ ಕಾಶೀ ಮಠಾಧೀಶ ಶ್ರೀಮತ್‌ ಸಂಯಮೀಂದ್ರತೀರ್ಥ ಸ್ವಾಮೀಜಿಯವರು ಆಶೀರ್ವದಿಸಿದರು.

ಅವರು ಕೋಟ ಕಾಶೀ ಮಠದ ಶ್ರೀ ಮುರಲೀಧರ ಕೃಷ್ಣ ಮುಖ್ಯಪ್ರಾಣ ದೇವಸ್ಥಾನದಲ್ಲಿ ವಿಕಾರಿ ನಾಮ ಸಂವತ್ಸರದ ಚಾತುರ್ಮಾಸ ವ್ರತವನ್ನು ಆಚರಿಸಲು ಪುರಪ್ರವೇಶದ ಅನಂತರ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಗುಲದ ಮೊಕ್ತೇಸರರು, ಆರ್ಚಕರು ಹಾಗೂ ಊರ -ಪರವೂರ ಸಮಾಜ ಬಾಂಧವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here