Home ಧಾರ್ಮಿಕ ಕಾರ್ಯಕ್ರಮ ಪೇಟೆ ಬೆಟ್ಟು : ಭಗವಾನ್‌ ಶ್ರೀ ಬಬ್ಬು ಸ್ವಾಮಿ ಹಾಗೂ ಕೊರಗಜ್ಜ ದೈವದ ದರ್ಶನ ಸೇವೆ

ಪೇಟೆ ಬೆಟ್ಟು : ಭಗವಾನ್‌ ಶ್ರೀ ಬಬ್ಬು ಸ್ವಾಮಿ ಹಾಗೂ ಕೊರಗಜ್ಜ ದೈವದ ದರ್ಶನ ಸೇವೆ

1252
0
SHARE

ಕಟಪಾಡಿ: ಕೋಟೆ ರಸ್ತೆಯ ಪೇಟೆಬೆಟ್ಟು ಭಗವಾನ್‌ ಶ್ರೀ ಬಬ್ಬು ಸ್ವಾಮಿ ದೈವಸ್ಥಾನದ ಕೊರಗಜ್ಜನ ಸನ್ನಿಧಿಯಲ್ಲಿ ವಿಶೇಷ ದರ್ಶನ ಸೇವೆಯು ಜೂ.15ರಂದು ಜರಗಿತು. ಕಾರಣಿಕದಿಂದಾಗಿ ಪ್ರಸಿದ್ಧಿ ಪಡೆದ ಕ್ಷೇತ್ರದಲ್ಲಿ ಹೆಚ್ಚುತ್ತಿದ್ದ ಭಕ್ತಾದಿಗಳ ಬೇಡಿಕೆಯಂತೆ ವಿಶೇಷ ದರ್ಶನ ಸೇವೆಯ ವ್ಯವಸ್ಥೆಯನ್ನು ಸಮಿತಿಯು ಕಲ್ಪಿಸಿತ್ತು. ಅನ್ಯಮತೀಯರ ಸಹಿತ ಸುಮಾರು 136ರಷ್ಟು ಸೇವಾರ್ಥಿಗಳು ಟೋಕನ್‌ ಮೂಲಕ ವಿಶೇಷ ದರ್ಶನದಲ್ಲಿ ತಮ್ಮ ಪ್ರಾರ್ಥನೆ, ನಿಗದಿಪಡಿಸಿದ ಸೇವೆಯನ್ನು ಸಲ್ಲಿಸಿರುತ್ತಾರೆ. ಈ ಬಾರಿ ಮೈಸೂರು, ಬೆಂಗಳೂರು, ಚಿಕ್ಕಮಗಳೂರು, ಮಂಡ್ಯ, ಹಾಸನ, ದಾವಣಗೆರೆ, ಅಂಕೋಲ, ಕೇರಳ, ಸುಬ್ರಹ್ಮಣ್ಯ, ಕಾಸರಗೋಡು ಭಾಗದಿಂದ ಭಕ್ತಾದಿಗಳು ಆಗಮಿಸಿ ದೈವದ ಅಭಯ ಪ್ರಸಾದವನ್ನು ಸ್ವೀಕರಿಸಿದ್ದಾರೆ ಎಂದು ಆಡಳಿತ ಮಂಡಳಿಯ ಸದಸ್ಯ ತಾರಾನಾಥ ತಿಳಿಸಿರುತ್ತಾರೆ.

ಈ ಸಂದರ್ಭ ವೈ. ಭರತ್‌ ಹೆಗ್ಡೆ, ಅಶೋಕ್‌ ಎನ್‌. ಪೂಜಾರಿ, ಪ್ರೇಮ್‌ ಕುಮಾರ್‌, ಗಣಪತಿ ನಾಯಕ್‌, ಅಧ್ಯಕ್ಷ ಹರಿಶ್ಚಂದ್ರ ಪಿಲಾರ್‌, ಕ್ಷೇತ್ರದ ಪ್ರಧಾನ ಅರ್ಚಕ ಜಯಕರ ಕಲ್ಮಾಡಿ, ರಾಜ್‌ ಗೋಪಾಲ್‌, ನವೀನ್‌ ಪಾತ್ರಿ, ಪಾಂಡು ಪಾತ್ರಿ, ಪಾಂಗಾಳ ನಾಯಕ್‌ ಮನೆತನದವರು, ಗ್ರಾಮಸ್ಥರು, ದೈವಸ್ಥಾನದ ಪ್ರಮುಖರು, ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here