Home ಧಾರ್ಮಿಕ ಸುದ್ದಿ ಭಕ್ತರ ನಿಸ್ವಾರ್ಥ ಸೇವೆಗೆ ದೇವರ ಅನುಗ್ರಹ ಸದಾ ಇದೆ: ಎಡನೀರು ಶ್ರೀ

ಭಕ್ತರ ನಿಸ್ವಾರ್ಥ ಸೇವೆಗೆ ದೇವರ ಅನುಗ್ರಹ ಸದಾ ಇದೆ: ಎಡನೀರು ಶ್ರೀ

1659
0
SHARE

ವಿದ್ಯಾನಗರ : ಭಕ್ತರ ನಿಸ್ವಾರ್ಥ ಸೇವೆಗೆ ದೇವರ ಅನುಗ್ರಹ ಸದಾ ಇರುತ್ತದೆ. ಭಕ್ತಿ, ಶ್ರದ್ಧೆ, ಅರ್ಪಣಾ ಮನೋಭಾವದಿಂದ ದೇವಸ್ಥಾನಗಳ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಭಗವಂತ ಕೈ ಹಿಡಿದು ಮುನ್ನಡೆಸುತ್ತಾನೆ. ಒಳ್ಳೆಯ ಚಿಙತನೆಗಳ ಮೂಲಕ, ಸತ್ಕಾರ್ಯಗಳ ಮೂಲಕ ಧರ್ಮ, ಸಂಸ್ಕೃತಿಯ ರಕ್ಷಣೆ ಸಾಧ್ಯ ಎಂದು ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮಿಜಿಯವರು ನುಡಿದರು.

ಆವರು ಕೂಡ್ಲು ದೇವರಗುಡ್ಡೆ ಶ್ರೀಶೈಲ ಮಹಾದೇವ ದೇವಸ್ಥಾನದಲ್ಲಿ ಅತಿರುದ್ರ ಮಹಾಯಾಗ ಹಾಗೂ ಬ್ರಹ್ಮಕಲಶೋತ್ವವದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿ ಮಾತನಾಡಿದರು.

ಉಳಿಯತ್ತಾಯ ವಿಷ್ಣು ಅಸ್ರ ಕಾರ್ಯಕ್ರಮ ಉದ್ಘಾಟಿಸಿದರು. ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ  ಆಶೀರ್ವಚನ ನೀಡಿ ಕರಾವಳಿ ಪ್ರದೇಶವು ಕಾಲಕಾಲಕ್ಕೆ ನಡೆಯುವ ಪೂಜೆ-ಪುನಸ್ಕಾರ, ಯಜ್ಞ- ಯಾಗಾದಿಗಳಿಂದ ಸಂಪದ್ಭರಿತವಾಗಿದೆ. ದೇಶದಲ್ಲಿ ಏಕತೆ ಜಾಗೃತವಾದಲ್ಲಿ ಮಾತ್ರ ಸಾಮಾನ್ಯನ ಬದುಕು ನಿರಾತಂಕವಾಗಿ ಸಾಗಲು ಸಾಧ್ಯಎಂದವರು ಹೇಳಿದರು.

ಹೆಣ್ಣು ಮಕ್ಕಳಲ್ಲಿ ಧರ್ಮ, ಸಂಸ್ಕೃತಿ ಮತ್ತು ಸಮಾಜದಲ್ಲಿ ಆಗುವ ಅನ್ಯಾಯಗಳ ಬಗ್ಗೆ ಸೂಕ್ತ ಜ್ಞಾನ ನೀಡಿ ಅತ್ಯಂತ ಸೂಕ್ಷ್ಮವಾಗಿ ಬೆಳೆಸಬೇಕಾದ ಅಗತ್ಯವಿದ್ದು ಮಾತೆಯರು ಆ ಕಾರ್ಯದಲ್ಲಿ ಸದಾ ಜಾಗೃತರಾಗಿರುವಂತೆ ಶ್ರೀಗಳು ಸೂಚಿಸಿದರು.

ಒಡಿಯೂರು ಗುರುದೇವದತ್ತ ಸಂಸ್ಥಾನಮ್‌ ಒನ ಶ್ರೀ ಗುರುದೇವಾನಂದ ಸ್ವಾಮೀಜಿ ಧರ್ಮ ಸಂದೇಶ ನೀಡಿದರು. ಗಣೇಶ್‌ ನಾಯಕ್‌ ಉಪಸ್ಥಿತರಿದ್ದರು. ಪ್ರತೀಕ್ಷ ಪ್ರಾರ್ಥನೆ ಹಾಡಿದರು. ಆತಿರುದ್ರ ಮಹಾಯಾಗ ಸಮಿತಿ ಪ್ರಧಾನ ಸಂಚಾಲಕ ನ್ಯಾಯವಾದಿ ಸತೀಶ್‌ ಕೋಟೆಕಣಿ ಸ್ವಾಗತಿಸಿ ಶ್ರೀ ಶೈಲ ಮಹಾದೇವ ಸೇವಾ ಟ್ರಸ್ಟ್‌ ಆಧ್ಯಕ್ಷ ಡಾ,ಜಯಪ್ರಕಾಶ್‌ ನಾಯಕ್‌ ಧನ್ಯವಾದ ಸಮರ್ಪಿಸಿದರು. ಆತಿರುದ್ರ ಮಹಾಯಾಗ ಸಮಿತಿ ಮಾರ್ಗದರ್ಶಕ ಮಂಡಳಿ ಸದಸ್ಯ ನ್ಯಾಯವಾದಿ ಕರುಣಾಕರನ್‌ ನಂಬ್ಯಾರ್‌ ನಿರೂಪಿಸಿದರು.

ಮಧ್ಯಾಹ್ನ ಕೃಷ್ಣಾನುಗ್ರಹ ಪುರಸ್ಕೃತ ಹರಿದಾಸ ಜಯಾನಂದ ಕುಮಾರ ಹೊಸದುರ್ಗ ಪ್ರಸ್ತುತ ಪಡಿಸುವ ದ್ವಾದಶ ಜ್ಯೋತಿರ್ಲಿಂಗ ಹರಿಕಥೆ ಮತ್ತು ಮಹಿಳಾ ಯಕ್ಷ ಕೂಟದಿಂದ ಯಕ್ಷಗಾನ ತಾಳಮದ್ದಳೆ ನಡೆಯಿತು.

ಶ್ರೀಶೆ„ಲಂ ಯಾಗ ಶಾಲೆಯಲ್ಲಿ ಪುಣ್ಯಾಹವಾಚನೆ, ಋಗÌವಣೆ, ರುದ್ರ ಪಾರಾಯಣ ಮಂಟಪ ಸಂಸ್ಕಾರ ಹಾಗೂ ಅತಿರುದ್ರ ಮಹಾಯಾಗದಂಗವಾಗಿ ರುದ್ರ ಕಲಶ ಪೂಜೆ. ರುದ್ರ ಹೋಮ, ರುದ್ರ ಜಪ ರುದ್ರಜಪ ಘನಪಾರಾಯಣ ನಡೆಯಿತು. ಶ್ರೀಶೆ„ಲೇಶ್ವರ ಮಂಟಪದಲ್ಲಿ ಕ್ಷೇತ್ರ ತಂತ್ರಿಗಳ ನೇತೃತ್ವದಲ್ಲಿ ಅಷ್ಟೋತ್ತರ ಶತ ನಾಳೀಕೇರ ಮಹಾಗಣಪತಿ ಹೋಮ, ಸ್ವಸ್ತಿ ಪುಣ್ಯಾಹ, ವಾಸ್ತುಪೂಜೆ, ರಾಕ್ಷೊàಘ್ನಹೋಮ, ವಾಸ್ತುಹೋಮ, ವಾಸ್ತುಬಲಿ, ಅಂಕುರಾರ್ಪಣೆ ಜರಗಿತು..

LEAVE A REPLY

Please enter your comment!
Please enter your name here