Home ಧಾರ್ಮಿಕ ಸುದ್ದಿ ಕೊಂಡೆವೂರು: ಪುನಃ ಪ್ರತಿಷ್ಠಾ ಅಷ್ಟಬಂಧ, ತ್ತತ್ವಹೋಮ

ಕೊಂಡೆವೂರು: ಪುನಃ ಪ್ರತಿಷ್ಠಾ ಅಷ್ಟಬಂಧ, ತ್ತತ್ವಹೋಮ

1699
0
SHARE

ಕುಂಬಳೆ  : ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದ ವಿಶ್ವಜಿತ್‌ ಅತಿರಾತ್ರ ಯಾಗದ ಅಂಗವಾಗಿ ಫೆ. 21ರಂದು ಶ್ರೀ ಗಾಯತ್ರೀ ದೇವಿಯ ಸನ್ನಿಧಾನದಲ್ಲಿ ಬೆಳಗ್ಗೆ ಪುಣ್ಯಾಹ, ಗಣಯಾಗ, ಪುನಃಪ್ರತಿಷ್ಠಾ ಅಷ್ಟಬಂಧ, ತ್ತತ್ವಹೋಮ, ಮಧ್ಯಾಹ್ನ ಪ್ರಸನ್ನ ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ ನಡೆಯಿತು. ಸಂಜೆ 108 ಕಲಶಾವಾಸ, ಅ ವಾಸ ಹೋಮ, ದುರ್ಗಾನಮಸ್ಕಾರ ಪೂಜೆ ನಡೆಯಿತು.

ಯಾಗಶಾಲೆಯಲ್ಲಿ ಪ್ರವರ್ಗ್ಯ, ಉಪಸತ್‌, ಸುಬ್ರಹ್ಮಣ್ಯಾಹ್ವಾನ, ವೇದಿ ನಿರ್ಮಾಣ, ಯೂಪಕರ್ಮ, ಚಯನಕರ್ಮ, ಅಪರಾಹ್ನ ಪ್ರವರ್ಗ್ಯ, ಉಪಸತ್‌, ಸುಬ್ರಹ್ಮಣ್ಯಾ ಹ್ವಾನಗಳು ವಿಧ್ಯುಕ್ತವಾಗಿ ನಡೆದವು, ಇಂದಿನ ಕಾರ್ಯಕ್ರಮ ಫೆ. 22ರಂದುಶ್ರೀ ಗಾಯತ್ರೀ ದೇವಿಯ ಸನ್ನಿಧಾನದಲ್ಲಿ ಬೆಳಗ್ಗೆ 5ರಿಂದ ಪುಣ್ಯಾಹ, ಗಣಯಾಗ. 7.48ಕ್ಕೆ ಕುಂಭಲಗ್ನದಲ್ಲಿ ಸಾನ್ನಿಧ್ಯ ಕಲಶಾಭಿಷೇಕ, 10 ಗಂಟೆಗೆ ಯತಿವರ್ಯರಿಗೆ ಪೂರ್ಣಕುಂಭ ಸ್ವಾಗತ, ಬಳಿಕ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹಾಗೂ ಕಣಿಯೂರು ಶ್ರೀ ಮಹಾಬಲ ಸ್ವಾಮೀಜಿ ಅವರಿಂದ ಅನುಗ್ರಹ ಸಂದೇಶ, ಮಧ್ಯಾಹ್ನ ಪ್ರಸನ್ನ ಮಹಾಪೂಜೆ, ಅನ್ನ ಸಂತರ್ಪಣೆ. ಸಂಜೆ 5ರಿಂದ ದುರ್ಗಾನಮಸ್ಕಾರ ಪೂಜೆ, ರಂಗ ಪೂಜೆ ನಡೆಯಲಿದೆ.

ಯಾಗಶಾಲೆಯಲ್ಲಿ ಸೂರ್ಯೋದಯಕ್ಕೆ ಪ್ರವರ್ಗ್ಯ, ಉಪಸತ್‌, ಸುಬ್ರಹ್ಮಣ್ಯಾಹ್ವಾನ, ಅರುಣ ಕೇತುಕ ಚಯನ, ಉಪಸ್ಥಾನ, ಪ್ರವರ್ಗ್ಯ ಉದ್ವಾಸನೆ, ಅಗ್ನಿ ಪ್ರಣಯನ, ಹವಿರ್ದಾನ- ಪ್ರಣಯನ, ಸದೋಮಂಟಪ ನಿರ್ಮಾಣ, ಅಗ್ನಿಷೋಮೀಯ ಪ್ರಣಯನ, ಅಗ್ನಿಷೋಮೀಯ ಯಾಗ, ವಸತೀವರೀಹರಣ, ಪಂಚಗೋದೋಹನ, ನಾಮಸುಬ್ರಹ್ಮಣ್ಯಾಹ್ವಾನ, ಸತ್ಯುಪಕ್ರಮ, ಬೆಳಗ್ಗೆ 10.30ಕ್ಕೆ ವೈಶ್ರವಣ ಯಜ್ಞಗಳು ನಡೆಯಲಿವೆ. 

ರಾತ್ರಿ 7.30ರಿಂದ ಶ್ರೀ ಗಾಯತ್ರೀ ಸಭಾ ಮಂಟಪದ ಧಾರ್ಮಿಕ ಸಭೆಯಲ್ಲಿ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಹಾಗೂ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅವರು ಆಶೀರ್ವಚನ ನೀಡುವರು.

ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿ, ಬ್ರಹ್ಮಶ್ರೀ ಕೈಮುಖ ಪೆರಿಂಪಡು ವೈದಿಕನ್‌ ಶ್ರೀರಾಮನ್‌ ಅಕ್ಕಿತ್ತಿರಿಪ್ಪಾಡ್‌, ಬ್ರಹ್ಮಶ್ರೀ ಚೇನಾಸ್‌ ದಿನೇಶನ್‌ ನಂಬೂದಿರಿಪ್ಪಾಡ್‌ ತಂತ್ರಿ, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಉಪಸ್ಥಿತರಿರುವರು. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ
ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ ಮತ್ತು ಜ| ವಿ.ಕೆ. ಸಿಂಗ್‌, ಆರೆಸ್ಸೆಸ್‌ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಿ.ಎಸ್‌. ಪ್ರಕಾಶ್‌, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಮೆಂಡನ್‌, ಉಮಾನಾಥ್‌ ಕೋಟ್ಯಾನ್‌, ಮಂಗಳೂರು ಮೇಯರ್‌ ಭಾಸ್ಕರ್‌ ಕೆ., ಮಾಜಿ ಸಚಿವ ಕೃಷ್ಣ ಪಾಲೆಮಾರ್‌, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಸುರೇಂದ್ರನ್‌, ಪ್ರಕಾಶ್‌ ಶೆಟ್ಟಿ ಬಂಜಾರ, ಕೆ.ಸಿ. ನಾೖಕ್‌, ಸತೀಶ್‌ ಪೂಜಾರಿ, ಡಾ| ಜೀವರಾಜ್‌ ಸೊರಕೆ, ಬೊಳ್ನಾಡುಗುತ್ತು ಚಂದ್ರಹಾಸ ರೈ, ಕಿಶೋರ್‌ ಆಳ್ವ, ಟಿ. ವಿಜಯಕುಮಾರ್‌ ರೆಡ್ಡಿ, ಭಾಸ್ಕರ ಶೆಟ್ಟಿ ಪುಣೆ, ದಯಾನಂದ ಬಂಗೇರ ಮುಂಬಯಿ, ಸದಾಶಿವ ಶೆಟ್ಟಿ, ಕೂಳೂರು ಕನ್ಯಾನ, ಮಾಧವ ಮಾವೆ, ಬೆಂಗಳೂರು, ಜಯದೇವ್‌ ಖಂಡಿಗೆ ಉಪಸ್ಥಿತರಿರುವರು.

ಎಣ್ಮಕಜೆ ಸುಧೀರ್‌ ಕುಮಾರ್‌ ಶೆಟ್ಟಿ, ಎಸ್‌. ಎನ್‌.ವಿ.ಎಲ್‌. ನರಸಿಂಹ ರಾಜು, ಶಾರದಮ್ಮ ಹಾಗೂ ಡಿ.ಎಸ್‌. ಸೂರ್ಯನಾರಾಯಣ ಅವರನ್ನು ಸಮ್ಮಾನಿಸಲಾಗುವುದು.

LEAVE A REPLY

Please enter your comment!
Please enter your name here