Home ಧಾರ್ಮಿಕ ಸುದ್ದಿ ಕೊಂಡೇತ್ತಾಯ ದೈವಸ್ಥಾನ ವಾರ್ಷಿಕ ಉತ್ಸವ: ಧಾರ್ಮಿಕ ಸಭೆ

ಕೊಂಡೇತ್ತಾಯ ದೈವಸ್ಥಾನ ವಾರ್ಷಿಕ ಉತ್ಸವ: ಧಾರ್ಮಿಕ ಸಭೆ

1482
0
SHARE

ಕಟೀಲು: ನಮ್ಮ ಹಿರಿಯರ ಪೂರ್ವಿಕರ ನಂಬಿಕೆ ಭಕ್ತಿಯ ಮೂಲಕವಾಗಿ ಧಾರ್ಮಿಕ ಆಚರಣೆಗಳು ನೆಲೆ ನಿಂತಿದೆ ಎಂದು ಕಟೀಲು ದೇವಸ್ಥಾನದ ಅರ್ಚಕ ವೇ| ಮೂ| ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.

ಅವರು ಫೆ. 10 ರಂದು ಕಟೀಲು ಸಮೀಪದ ಕೊಂಡೇಲ ಶ್ರೀ ಕೊಂಡೇತ್ತಾಯ ದೈವಸ್ಥಾನದ ವಾರ್ಷಿಕ ಉತ್ಸವ, ಸತ್ಯನಾರಾಯಣ ಪೂಜೆ, ಚೌತಿ ಹಬ್ಬದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಕಟೀಲಿನ ಅರ್ಚಕ ವೇ|ಮೂ| ಅನಂತಪದ್ಮನಾಭ ಆಸ್ರಣ್ಣ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಿನ್ನಿಗೋಳಿ ಹಿಂದು ರುದ್ರಭೂಮಿ ನಿರ್ವಾಹಕ ಮಾಧವ ಶೆಟ್ಟಿಗಾರ್‌ ಕೆರೆಕಾಡು ಅವರನ್ನು ಸಮ್ಮಾನಿಸಲಾಯಿತು.

ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಈಶ್ವರ್‌ ಕಟೀಲು, ಕಟೀಲು ಗ್ರಾ. ಪಂ. ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್‌ ಕುಮಾರ್‌ ಶೆಟ್ಟಿ ಕೊಡೆತ್ತೂರು, ಅರಸು ಕುಂಜಿರಾಯ ದೈವಸ್ಥಾನದ ಮೊಕ್ತೇಸರ ದೇವಿಪ್ರಸಾದ್‌ ಶೆಟ್ಟಿ ಕೊಡೆತ್ತೂರು, ಅರಸು ಕುಂಜಿರಾಯ ದೈವಸ್ಥಾನದ ಜಯರಾಮ ಮುಕ್ಕಾಲ್ದಿ, ಉದ್ಯಮಿ ಗಿರೀಶ್‌ ಶೆಟ್ಟಿ ಅಜಾರು, ಗಣೇಶ್‌ ಶೆಟ್ಟಿ ಮಿತ್ತಬೈಲುಗುತ್ತು, ಸಮಿತಿಯ ಕಾರ್ಯದರ್ಶಿ ರಾಮ ಬಂಗೇರ, ಕೋಶಾಧಿಕಾರಿ ಅಶೋಕ ಪೂಜಾರಿ ಉಪಸ್ಥಿತರಿದ್ದರು. ಅಧ್ಯಕ್ಷ ಲೋಕಯ್ಯ ಸಾಲ್ಯಾನ್‌ ಕೊಂಡೇಲ ಸ್ವಾಗತಸಿದರು. ನಿತಿನ್‌ ಸಮ್ಮಾನ ಪತ್ರ ವಾಚಿಸಿದರು. ಪ್ರವೀಣ್‌ ಕೊಂಡೇಲ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here