ಕಲ್ಲುಗುಡ್ಡೆ: ಕಡ್ಯ-ಕೊಣಾಜೆ ಗ್ರಾಮದ ಕೊಣಾಜೆ ಶ್ರೀ ಉಳ್ಳಾಕ್ಲು ಹಾಗೂ ಸಪರಿವಾರ ದೈವಗಳ ದೈವಸ್ಥಾನ ದಲ್ಲಿ ಎ. 29ರಂದು ಆರಂಭಗೊಂಡ ಶ್ರಿ ಉಳ್ಳಾಕ್ಲು ಹಾಗೂ ಸಪರಿವಾರ ದೈವಗಳ ವರ್ಷಾವಧಿ ಜಾತ್ರೆಯು ಗುರುವಾರ ಸಂಪನ್ನಗೊಂಡಿತು.
ಮಂಗಳವಾರ ಸಂಜೆ ಶ್ರೀ ಉಳ್ಳಾಕ್ಲು ಮತ್ತು ಮುದ್ದೇರ್ಲಾಯ ಭಂಡಾರ ಹಿಡಿದು ರಾತ್ರಿ ನೇಮ, ಬುಧವಾರ ಬೆಳಗ್ಗೆ ಅಲ್ನಾತ್ತಾಯ ದೈವದ ಮತ್ತು ಹುಲಿಭೂತ ದೈವದ ಭಂಡಾರ ಹಿಡಿದು ಸಂಜೆ ದೆಯ್ಯೆರೆ ನೇಮ, ರಾತ್ರಿ ಅಲ್ನತ್ತಾಯ ದೈವದ ನೇಮ, ಗುರುವಾರ ಹುಲಿಭೂತ ದೈವದ ನೇಮ, ಮಧ್ಯಾಹ್ನ ಧ್ವಜಾವರೋಹಣ ಮಾಡಿ, ರಾತ್ರಿ ಶಿರಾಡಿ ದೈವದ ಭಂಡಾರ ಹಿಡಿದು ನೇಮ ನಡೆಯಿತು. ಜನಾರ್ದನ ಕೊಣಾಜೆ, ಲೋಕೇಶ ಪರವರವರು ದೈವದ ನರ್ತನ ಸೇವೆ ನೆರವೇರಿಸಿದರು.
ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಲ್ಲಾಳ್, ಮಂಜುನಾಥ ಭಂಡಾರಿ ಮೀನಾಡಿಗುತ್ತು, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೆಂಕಟ್ರಮಣ ಗೌಡ ಬ್ರಂತೋಡು, ದೈವಗಳ ಪ್ರಧಾನ ಪೂಜಾರಿ ಕೆ. ಕುಶಾಲಪ್ಪ ಗೌಡ ಕೆರ್ನಡ್ಕ, ನಾಲ್ವೇಕಿಯವರಾದ ಚಂದ್ರಶೇಖರ ಗೌಡ ಬ್ರಂತೋಡು, ಸುಂದರ ಗೌಡ ದೊಡ್ಡಮನೆ, ಉಮೇಶ ಗೌಡ ಕಲ್ಲೂರು, ಕುಶಾಲಪ್ಪ ಗೌಡ ಆಯರ್ತಮನೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ತಿಮ್ಮಪ್ಪ ಗೌಡ ಬ್ರಂತೋಡು, ಕಾರ್ಯದರ್ಶಿ ನವೀನ ಗೌಡ ಮನೆಜಾಲು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೆ. ಕುಶಾಲಪ್ಪ ಗೌಡ ಕೆರ್ನಡ್ಕ, ಮಹಾಲಿಂಗ ಗೌಡ ಕನಿಯ, ಶಿವರಾಮ ನಾಯ್ಕ ಬೊಳ್ಳೋಳಿ, ರಘುಚಂದ್ರ ಮನೆಜಾಲು, ರಾಮಣ್ಣ ಆಚಾರಿ, ಹೇಮಾವತಿ ದೊಡ್ಡಮನೆ, ಹರೀಶ್ ಕಲ್ಲೂರು, ನಾಗವೇಣ ಆಯರ್ತಮನೆ, ದೈವದ ಪರಿಚಾರಕರು, 16 ವರ್ಗದ ಮನೆಯವರು ಉಪಸ್ಥಿತರಿದ್ದರು.