Home Uncategorized “ಕಷ್ಟದಲ್ಲಿದವರ ನೋವಿಗೆ ಸ್ಪಂದಿಸುತ್ತಿದ್ದ ಕೊಲ್ಯ ಶ್ರೀಗಳು’

“ಕಷ್ಟದಲ್ಲಿದವರ ನೋವಿಗೆ ಸ್ಪಂದಿಸುತ್ತಿದ್ದ ಕೊಲ್ಯ ಶ್ರೀಗಳು’

1971
0
SHARE

ಕೊಲ್ಯ : ಕಷ್ಟದಲ್ಲಿದ್ದವರ ನೋವಿಗೆ ಸ್ಪಂದಿಸುತ್ತಿದ್ದ ಜಿಲ್ಲೆಯ ಏಕೈಕ ಸ್ವಾಮೀಜಿ ವೃಂದಾವನಸ್ಥರಾಗಿರುವ ಕೊಲ್ಯ ಶ್ರೀಗಳು. ಇಂದಿನ ಸಮಾಜಕ್ಕೆ ಅವರ ಕೊರತೆ ಎದ್ದು ಕಾಣುತ್ತಿದೆ ಎಂದು ಕೇಮಾರು ಶ್ರೀ ಈಶ ವಿಟ್ಠಲದಾಸ ಸ್ವಾಮಿಜಿ ಅಭಿಪ್ರಾಯಪಟ್ಟರು.

ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನ ದಲ್ಲಿ ಶ್ರೀ ಜಗದ್ಗುರು ರಮಾನಂದ ಸ್ವಾಮೀಜಿ ಮಹಾಸಂಸ್ಥಾನಮ್‌ ಚಾರಿ ಟೆಬಲ್‌ ಟ್ರಸ್ಟ್‌ನ ಆಶ್ರಯದಲ್ಲಿ ಶ್ರೀ ರಮಾ ನಂದ ಸ್ವಾಮೀಜಿಯವರ ಎರಡನೇ ಪುಣ್ಯ ಸ್ಮರಣೆ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಶಿಕ್ಷಣಕ್ಕೆ ಆದ್ಯತೆ
ಕೊಲ್ಯ ಶ್ರೀಗಳಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುಣವಿತ್ತು. ಅವರದು ಸಾಧು ಸಂತ ಪೂರ್ಣತ್ವದ ನಡೆ ನುಡಿ. ಕನ್ನಡ ಶಾಲೆಯ ಮೂಲಕ ಬಡ ಜನರ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರು. ಅವರ ಕಾರ್ಯಗಳನ್ನು ಮುನ್ನಡೆಸುವ ನಿಟ್ಟಿನಲ್ಲಿ ಪ್ರಾರಂಭಗೊಂಡಿರುವ ಟ್ರಸ್ಟ್‌ ಮುಂದಿನ ದಿನಗಳಲ್ಲಿ ಉತ್ತಮ ಕಾರ್ಯಗಳನ್ನು ನಡೆಸಲಿ ಎಂದರು.

ಜೀವನ ತಣ್ತೀ ಅಳವಡಿಸಿ
ಶ್ರೀ ಮುಕ್ತಾನಂದ ಸ್ವಾಮೀಜಿ ಕರೀಂಜೆ ಮಾತನಾಡಿ, ಆಧ್ಯಾತ್ಮಿಕ ಸಾಧನೆ ಮಾಡಿ ರುವ ಕೊಲ್ಯ ಸ್ವಾಮೀಜಿಗಳು ಧಾರ್ಮಿಕ ಕಾರ್ಯಗಳಿಗೆ ಸೀಮಿತ ವಾಗಿರದೆ, ಆಪತ್ಕಾಲದಿಂದ ತೊಂದರೆ ಯದವರಿಗೆ ಸ್ಪಂದಿಸಿ, ಧೈರ್ಯ ಸ್ಥೈರ್ಯನೀಡುತ್ತಿದ್ದರು. ಕೊಲ್ಯಶ್ರೀಗಳ ಜೀವನ ತಣ್ತೀವನ್ನು ಜೀವನ ದಲ್ಲಿ ಅಳವಡಿಸುವ ಅಗತ್ಯ ಇದೆ ಎಂದು ಅವರು ಹೇಳಿದರು.

ವಿಶ್ವಹಿಂದೂ ಪರಿಷತ್‌ನ ಮುಖಂಡ ಪ್ರೊ| ಎಂ.ಬಿ. ಪುರಾಣಿಕ್‌ ಮಾತನಾಡಿ, ಕೊಲ್ಯ ಶ್ರೀಗಳಲ್ಲಿ ಆರ್ಥಿಕ ಸಂಪತ್ತು ಇಲ್ಲದಿದ್ದರೂ ಕಷ್ಟದಲ್ಲಿ ದವರಿಗೆಚ ಸ್ಪಂದಿಸಿ ದವರು. ಹಿಂದೂ ಧರ್ಮ ಸಂಸ್ಕೃತಿಗೆ ಅವರ ಕೊಡುಗೆ ಅಪಾರ. ಸಾವಿರಾರು ಭಕ್ತರು ಕಟ್ಟಿದ ಈ ಕ್ಷೇತ್ರದ ಅಭಿವೃದ್ಧಿಗೆ ನಾವೆಲ್ಲರು ಕೈಜೋಡಿಸುವ ಅಗತ್ಯವಿದ್ದು, ಇಡೀ ಸಮಾಜ ಒಟ್ಟಾಗಿ ಕೊಲ್ಯ ಶ್ರೀಗಳ ಆಶೋತ್ತರವನ್ನು ಈಡೇರಿಸುವ ಕಾರ್ಯ ಆಗಬೇಕು ಎಂದರು.

ಸೀತಾರಾಮ ಬಂಗೇರ. ಸೋಮೇಶ್ವರ ಗ್ರಾ.ಪಂ. ಅಧ್ಯಕ್ಷ ರಾಜೇಶ್‌ ಉಚ್ಚಿಲ್‌ ಉಪಸ್ಥಿತರಿದ್ದರು. ಮ್ಯಾನೇಜಿಂಗ್‌ ಟ್ರಸ್ಟಿ ಮಹಾಬಲ ಶೆಟ್ಟಿ ಸ್ವಾಗತಿಸಿದರು. ಕೃಷ್ಣಮೂರ್ತಿ ಪ್ರಾಸ್ತಾವಿಸಿ ದರು. ಕೋಶಾಧ್ಯಕ್ಷ ವಾಸುದೇವ ಗೌಡ ವಂದಿಸಿದರು. ಕಾರ್ಯದರ್ಶಿ ನಾರಾ ಯಣ ಕುಂಪಲ ನಿರ್ವಹಿಸಿದರು. ಕಾರ್ಯಕ್ರಮದ ಅಂಗವಾಗಿ ಗಣಪತಿ ಹೋಮ, ಲಲಿತಾ ಸಹಸ್ರನಾಮ, ಗುರು ಪೂಜೆ, ಭಜನ ಸಂಕೀರ್ತನೆ, ಮಹಾಪೂಜೆ ನಡೆಯಿತು.

LEAVE A REPLY

Please enter your comment!
Please enter your name here