ಚೇಳಾೖರು: ಭಗವಂತನ ದಯೆ ಇಲ್ಲದೆ ಮನುಷ್ಯ ಎಷ್ಟೇ ಪ್ರಯತ್ನಪಟ್ಟರೂ ಏನನ್ನೂ ಸಾಧನೆ ಮಾಡಲು ಆಗುವುದಿಲ್ಲ ಎಂದು ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಹೇಳಿದರು.
ಚೇಳಾೖರು ಕೊಲ್ಯ ಶ್ರೀ ಜಾರಂದಾಯ ದೈವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರೇರಣೆ ದಯೆ ಇದ್ದರೆ ಮಾತ್ರ ಯಾವುದೇ ಕಾರ್ಯ ನಿರ್ವಿಘ್ನವಾಗಿ ನಡೆಯಲಿದೆ. ನಾನು ಎಂಬುದು ಇಲ್ಲಿ ಶೂನ್ಯ ಭಗವಂತನು ಎಲ್ಲವನ್ನೂ ಮಾಡಿ ಸುತ್ತಿದ್ದಾನೆ ಎಂದಾಗ ಮಾತ್ರ ಅನುಗ್ರಹಿಸುತ್ತಾನೆ ಎಂದರು.
ನಿಸರ್ಗ ಎಂಜಿನಿಯರ್ನ ಪ್ರಕಾಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಅನಂತ ಆಸ್ರಣ್ಣ, ಮಾಜಿ ಸಚಿವ ಅಭಯಚಂದ್ರ ಜೈನ್, ಸತ್ಯಜಿತ್ ಸುರತ್ಕಲ್, ತಾ.ಪಂ. ಸದಸ್ಯೆ ವಜ್ರಾಕ್ಷಿ ಶೆಟ್ಟಿ, ಚೇಳಾೖರು ಗ್ರಾ.ಪಂ. ಅಧ್ಯಕ್ಷ ಜಯಾನಂದ, ಮಾಜಿ ಮೇಯರ್ ರಜನಿ ದುಗ್ಗಣ್ಣ, ಸತೀಶ್ ಮುಂಚೂರು, ಮಾಜಿ ಶಾಸಕರಾದ ವಿಜಯಕುಮಾರ್ ಶೆಟ್ಟಿ, ಮಹಾಬಲ ಪೂಜಾರಿ ಕಡಂಬೋಡಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರವಿಪ್ರಸನ್ನ ಸಿ.ಕೆ., ಕೋಶಾಧಿಕಾರಿ ದಯಾನಂದ ಶೆಟ್ಟಿ, ಆಡಳಿತ ಸಮಿತಿಯ ಅಧ್ಯಕ್ಷ ಅಣ್ಣು ಕೋಟ್ಯಾನ್, ಕೋಶಾಧಿಕಾರಿ ಸುಧಾಕರ ಶೆಟ್ಟಿ, ಕಾರ್ಯದರ್ಶಿ ಉಮೇಶ್ ಕೋಟ್ಯಾನ್, ಕ್ಷೇತ್ರದ ಅರ್ಚಕ ಸದಾನಂದ ಪೂಜಾರಿ, ನಾಗೇಶ್ ಕೊಲ್ಯ, ದೀಪಕ್ ಕೊಲ್ಯ, ದೀಪಕ್ ಅಮೀನ್ ಕೊಲ್ಯ, ಗಣೇಶ್ ಕೋಟ್ಯಾನ್, ವಾಮನ ಕರ್ಕೇರ, ಸೋಮನಾಥ ಕೊಲ್ಯ, ದೀಪಕ್ ಪೆರ್ಮುದೆ ಉಪಸ್ಥಿತರಿದ್ದರು. ರಮೇಶ್ ಪೂಜಾರಿ ಸ್ವಾಗತಿಸಿ,ಪ್ರದೀಪ್ ವಂದಿಸಿದರು. ನರೇಶ್ ಸಸಿಹಿತ್ಲು ನಿರೂಪಿಸಿದರು.
ಮುಖ್ಯ ಅತಿಥಿಯಾಗಿದ್ದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಕಾಲಕಾಲಕ್ಕೆ ಮಳೆ ಬೆಳೆಯನ್ನು ಭಗವಂತ ಅನುಗ್ರಹಿಸಬೇಕು. ಆದುದರಿಂದ ಎಲ್ಲವನ್ನು ದಯಪಾಲಿಸುವ ದೇವರನ್ನು ಪೂಜಿಸುವ ಕರ್ತವ್ಯ ನಮ್ಮದಾಗಿದೆ ಎಂದರು.
ಭಗವಂತ ಅನುಗ್ರಹ ಅಗತ್ಯ
ಮುಖ್ಯ ಅತಿಥಿಯಾಗಿದ್ದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಕಾಲಕಾಲಕ್ಕೆ ಮಳೆ ಬೆಳೆಯನ್ನು ಭಗವಂತ ಅನುಗ್ರಹಿಸಬೇಕು. ಆದುದರಿಂದ ಎಲ್ಲವನ್ನು ದಯಪಾಲಿಸುವ ದೇವರನ್ನು ಪೂಜಿಸುವ ಕರ್ತವ್ಯ ನಮ್ಮದಾಗಿದೆ ಎಂದರು.