ಕೊಲ್ಲೂರು: ಶ್ರೀ ಮೂಕಾಂಬಿಕಾ ದೇಗುಲದ ವ್ಯವಸ್ಥಾಪನ ಸಮಿತಿಗೆ ಮೀಸಲಾಗಿರುವ 9 ಸ್ಥಾನಗಳಿಗಾಗಿ ಭಾರೀ ಪೈಪೋಟಿ ಕಂಡು ಬರುತ್ತಿದೆ.
ಹಾಲಿ ಸಮಿತಿಯ ಅವಧಿ ಕಳೆದ ಎಪ್ರಿಲ್ಗೆ ಮುಗಿದಿದ್ದು, ಎರಡು ತಿಂಗಳಿಂದ ಆಡಳಿತಾಧಿಕಾರಿ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಸಮಿತಿಯ 9 ಸದಸ್ಯರಲ್ಲಿ ಅರ್ಚಕರು, ಪರಿಶಿಷ್ಟ ಜಾತಿ ಹಾಗೂ ಮಹಿಳೆಯರಿಗೆ 4 ಸ್ಥಾನ ಮೀಸಲಿಡಲಾಗಿದೆ. ಉಳಿದ 5 ಸ್ಥಾನಗಳಿಗೆ ರಾಜ್ಯದ 300ರಷ್ಟು ಅಕಾಂಕ್ಷಿಗಳು ಅರ್ಜಿ ಸಲ್ಲಿಸಿರುತ್ತಾರೆ. ಅರ್ಜಿ ಸಲ್ಲಿಕೆ ಮುಕ್ತಾಯವಾಗಿದ್ದು, ಜುಲೈ ತಿಂಗಳಲ್ಲಿ ಸರಕಾರವು ಐವರ ಹೆಸರನ್ನು ಅಂತಿಮಗೊಳಿಸಲಿದೆ.