ಇಡ್ಕಿದು ಫೆ. 20: ಇಲ್ಲಿನ ಕೋಲ್ಪೆ, ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಿರ್ಮಾಣಗೊಂಡ ಒಳಾಂಗಣ ಹಂಚಿನ ಮಾಡು ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ವತಿಯಿಂದ 1 ಲಕ್ಷ ರೂ. ದೇಣಿಗೆ ನೀಡಲಾಯಿತು.
ಬಂಟ್ವಾಳ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧಿ ಯೋಜನೆಯ ಅಧಿಕಾರಿ ಸುನೀತಾ ದೇಣಿಗೆ ಮೊತ್ತದ ಡಿ.ಡಿ.ಯನ್ನು ದೇವಸ್ಥಾನದ ಅಧ್ಯಕ್ಷ ಕ.ಶಿ. ವಿಶ್ವನಾಥ್ ಅವರಿಗೆ ರವಿವಾರ ಹಸ್ತಾಂತರಿಸಿದರು. ವಿಟ್ಲ ವಲಯದ ಮೇಲ್ವಿಚಾರಕಿ ಪ್ರೇಮಾ, ಬಂಟ್ವಾಳ ತಾಲೂಕಿನ ಕೃಷಿ ಮೇಲ್ವಿಚಾರಕ ನಾರಾಯಣ, ಇಡ್ಕಿದು ಒಕ್ಕೂಟ ಸೇವಾ ಪ್ರತಿನಿಧಿ ಗೀತಾ, ಇಡ್ಕಿದು ಒಕ್ಕೂಟದ ಅಧ್ಯಕ್ಷ ಜನಾರ್ದನ ಕುಲಾಲ…, ಕೋಲ್ಪೆ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಸುಬ್ರಾಯ ಭಟ್ ಕೋಂಕೊಡಿ, ಸುರೇಶ್ ಪೂಜಾರಿ, ಕ್ಷೇತ್ರದ ಅರ್ಚಕ ತಿರುಮಲೇಶ್ವರ ಭಟ್, ಸಿಬಂದಿ ವಾಸು ಸಪಲ್ಯ ಉಪಸ್ಥಿತರಿದ್ದರು.