Home ಧಾರ್ಮಿಕ ಸುದ್ದಿ ‘ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಧಾರ್ಮಿಕ ಶಿಕ್ಷಣ ಅವಶ್ಯ’

‘ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಧಾರ್ಮಿಕ ಶಿಕ್ಷಣ ಅವಶ್ಯ’

ನೂರಾನಿಯ್ಯ ಮದ್ರಸದ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ

1497
0
SHARE
ನೆಲ್ಯಾಡಿ ನೂರಾನಿಯ್ಯ ಮದ್ರಸದ ಪ್ರಾರಂಭೋತ್ಸವ ನಡೆಯಿತು.

ನೆಲ್ಯಾಡಿ: ಸುಸಂಸ್ಕೃತ ಹಾಗೂ ಮಾದರಿ ಸಮಾಜ ನಿರ್ಮಾಣಕ್ಕೆ ಧಾರ್ಮಿಕ ಶಿಕ್ಷಣ ಅನಿವಾರ್ಯ ಎಂದು ಕೋಲ್ಪೆ ಖತೀಬ್‌ ಉಸ್ತಾದ್‌ ಅಬ್ದುರ್ರಶೀದ್‌ ರಹ್ಮಾನಿ ಹೇಳಿದರು.

ಕೋಲ್ಪೆ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾ ಚರಿಸುತ್ತಿರುವ ನೂರಾನಿಯ್ಯ ಮದ್ರಸದ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಹಾಗೂ ಸ್ವಾಗತ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಇಸ್ಲಾಂ ಧರ್ಮವು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಮಹತ್ವವನ್ನು ವಿವರಿಸಿ, ಮನುಷ್ಯನ ಜೀವನದ ಸರ್ವ ಮಜಲುಗಳನ್ನು ಸ್ಪಷ್ಟವಾಗಿ ಸ್ಪರ್ಶಿಸುವ ಇಸ್ಲಾಂ ಧರ್ಮವು ಮಾದರಿ ಜೀವನ ನಡೆಸಲು ಆದೇಶಿಸುತ್ತದೆ. ಈ ಜೀವನಕ್ಕೆ ರೀತಿ ನೀತಿಗಳನ್ನು ತಿಳಿಸಲು ಧಾರ್ಮಿಕ ಶಿಕ್ಷಣ ಅನಿವಾರ್ಯ ಎಂದರು.

ಈಗೀಗ ನಡೆಯುವ ಅನಾಚಾರ, ದುರ್ನಡತೆ, ಮಾದಕ ದ್ರವ್ಯ ಸೇವನೆ ಮೊದಲಾದ ಅನೈತಿಕ ಕೃತ್ಯಗಳಿಗೆ ಧಾರ್ಮಿಕ ಶಿಕ್ಷಣದ ಕೊರತೆಯೇ ಕಾರಣವಾಗಿದ್ದು, ಹೆತ್ತವರು ಈ ಬಗ್ಗೆ ಜಾಗೃತರಾಗಬೇಕೆಂದು ಕರೆ ನೀಡಿದರು.

ಕೋಲ್ಪೆ ಬದ್ರಿಯಾ ಮಸೀದಿ ಅಧ್ಯಕ್ಷ ಕೆ.ಕೆ. ಅಬೂಬಕ್ಕರ್‌ ಅಧ್ಯಕ್ಷತೆ ವಹಿಸಿದ್ದರು. ಸಯ್ಯಿದ್‌ ಅಬ್ದುಲ್ಲ ತಂšಳ್‌ ಕೋಲ್ಪೆ ದುವಾಗೈದರು.

ಮದ್ರಸ ಮುಖ್ಯ ಅಧ್ಯಾಪಕ ಯೂಸುಫ್ ಮುಸ್ಲಿಯಾರ್‌ ತುರ್ಕಳಿಕೆ ಮದ್ರಸ ಶಿಕ್ಷಣದ ಬಗ್ಗೆ ಮಾತನಾಡಿ, ಸರ್ವ ಜಮಾಅತರ ಸಹಕಾರ ಕೋರಿದರು. ಖಲಂದರ್‌ ಷಾ ದಫ್ ಸಮಿತಿ ಕೋಲ್ಪೆ ಇದರ ವತಿಯಿಂದ ನೂತನ ಉಸ್ತಾದರನ್ನು ಸ್ವಾಗತಿಸಿದರು.

ಕೊಚ್ಚಿಲ ಮಸೀದಿಯ ಇಮಾಂ ಝಕರಿಯಾ ಮೌಲವಿ ಮರ್ಧಾಳ, ಕೆ.ಕೆ. ಉಸ್ಮಾನ್‌ ಕೋಲ್ಪೆ, ಅಧ್ಯಾಪಕರಾದ ಯು.ಪಿ. ಅಬ್ದುಲ್ ಹಮೀದ್‌ ಮುಸ್ಲಿಯಾರ್‌ ಉರುವಾಲ್ ಪದವು, ಅಬ್ದುರ್ರಹ್ಮಾನ್‌ ಮುಸ್ಲಿಯಾರ್‌ ಗಂಡಿಬಾಗಿಲು, ಅಬ್ಟಾಸ್‌ ಮುಸ್ಲಿಯಾರ್‌ ಕರಾಯ, ಜಮಾಅತ್‌ ಉಪಾಧ್ಯಕ್ಷ ಅಬ್ದುಲ್ಲ ಕುಂಞಿ ಗೋಳಿತೊಟ್ಟು, ಪ್ರ.ಕಾರ್ಯದರ್ಶಿ ರಂಜಾನ್‌ ಸಾಹೇಬ್‌, ಖಲಂದರ್‌ ಷಾ ದಫ್ ಸಮಿತಿ ಕೋಶಾಧಿಕಾರಿ ಎಸ್‌.ಕೆ. ರಝಾಕ್‌, ಮದ್ರಸ ಉಸ್ತುವಾರಿ ಯು.ಕೆ. ಹಮೀದ್‌, ಎ.ಎಂ.ವೈ.ಎ. ಗೋಳಿತೊಟ್ಟು ಅಧ್ಯಕ್ಷ ಪಿ.ಎಸ್‌. ಹಾರಿಸ್‌, ಗೋಳಿತೊಟ್ಟು ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಇಲ್ಯಾಸ್‌ ಉಪಸ್ಥಿತರಿದ್ದರು.

ಖಲಂದರ್‌ ಷಾ ದಫ್ ಸಮಿತಿ ಅಧ್ಯಕ್ಷ ಕೆ.ಕೆ. ಇಸ್ಮಾಯಿಲ್ ಸ್ವಾಗತಿಸಿ, ಪ್ರ. ಕಾರ್ಯದರ್ಶಿ ಸ್ವಾದಿಕ್‌ ಕೋಲ್ಪೆ ಕಾರ್ಯಕ್ರಮ ನಿರೂಪಿಸಿದರು. ಎಸ್ಕೆಎಸ್ಸೆಸೆಫ್ ಕೋಲ್ಪೆ ಕ್ಲಸ್ಟರ್‌ ಅಧ್ಯಕ್ಷ ರಹೀಂ ಕೋಲ್ಪೆ ವಂದಿಸಿದರು.

LEAVE A REPLY

Please enter your comment!
Please enter your name here