ಕೊಲ್ಲೂರು: ತೆಂಕುತಿಟ್ಟಿನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಹಾಗೂ ಸತ್ಯನಾರಾಯಣ ಪುಣಚಿತ್ತಾಯ ಹಾಗೂ ಬಳಗದವರಿಂದ ಮೇ 22 ರಂದು ಶ್ರೀ ಮೂಕಾಂಬಿಕಾ ದೇಗುಲದ ಸರಸ್ವತಿ ಮಂಟಪದಲ್ಲಿ ಯಕ್ಷಗಾನ ಸೇವೆೆಯ ಸೇವಾ ಭಾಗವತಿಕೆ ನಡೆಯಿತು.
ಹಿಮ್ಮೇಳದಲ್ಲಿ ಪದ್ಮನಾಭ ಉಪಾಧ್ಯಾಯ, ಗುರುಪ್ರಸಾದ, ಶಶಿ ಆಚಾರ್ ಉಡುಪಿ, ರಾಜೇಂದ್ರ ಕೃಷ್ಣ, ಪಟ್ಲ ಫೌಂಡೇಶನ್ ಕಾರ್ಯದರ್ಶಿ ಪುರುಶೋತ್ತಮ ಸಹಕರಿಸಿದ್ದರು.
ದೇಗುಲದ ವ್ಯವಸ್ಥಾಪನ ಸಮಿತಿ ಸದಸ್ಯ ರಮೇಶ ಗಾಣಿಗ ಕೊಲ್ಲೂರು, ದೇಗುಲದ ಪಿ.ಆರ್.ಒ. ಜಯಕುಮಾರ್ ಸಹಿತ ಸಿಬಂದಿ ಸಹಕರಿಸಿದ್ದರು.