Home ಧಾರ್ಮಿಕ ಸುದ್ದಿ ಕೊಲ್ಲೂರು : ಭರದಿಂದ ಸಾಗುತ್ತಿರುವ ದೇಗುಲದ ಅಭಿವೃದ್ಧಿ ಕಾಮಗಾರಿ

ಕೊಲ್ಲೂರು : ಭರದಿಂದ ಸಾಗುತ್ತಿರುವ ದೇಗುಲದ ಅಭಿವೃದ್ಧಿ ಕಾಮಗಾರಿ

850
0
SHARE

ಕೊಲ್ಲೂರು : ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ 65 ಕೋ. ರೂ. ವೆಚ್ಚದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಮುಂದಿನ ಸೆಪ್ಟೆಂಬರ್‌ ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

ಕೊಲ್ಲೂರು ಗ್ರಾ.ಪಂ. ವ್ಯಾಪ್ತಿಗೆ 21 ಕೋ. ರೂ. ವೆಚ್ಚದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, 19.50 ಕೋ.ರೂ. ವೆಚ್ಚದಲ್ಲಿ ಒಳಚರಂಡಿ, 21 ಕೋ.ರೂ. ವೆಚ್ಚದ ಭೋಜನ ಶಾಲೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

ಕುಡಿಯುವ ನೀರಿನ ವ್ಯವಸ್ಥೆಗಾಗಿ ವಿಶೇಷ ಡ್ಯಾಮ್‌ ನಿರ್ಮಿಸಲಾಗಿದ್ದು ಪೈಪ್‌ಲೈನ್‌ ಜೋಡಣೆ ಕಾಮಗಾರಿ ಪೂರ್ಣಗೊಂಡಿದೆ. ಒಳಚರಂಡಿ ವ್ಯವಸ್ಥೆಯಲ್ಲಿನ ತೊಡಕನ್ನು
ನಿಭಾಯಿಸಿ ಕೊಲ್ಲೂರು ದೇಗುಲದವರೆಗೆ ನೀರಿನ ಹೊರಹರಿವಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಶ್ರೀ ಕ್ಷೇತ್ರ ಕೊಲ್ಲೂರು, ಜಿಲ್ಲಾಡಳಿತದ ನೇತೃತ್ವ
ಕಳೆದ ಮೂರು ವರ್ಷಗಳಿಂದ ಇಲ್ಲಿನ ಮೂಲ ಸೌಕರ್ಯದ ಕೊರತೆ ಪರಿಹರಿಸುವಂತೆ ಗ್ರಾಮಸ್ಥರು ಸರಕಾರಕ್ಕೆ ಬೇಡಿಕೆ ಸಲ್ಲಿಸಿದ್ದರು. ಮಾಜಿ ಆಡಳಿತ ಧರ್ಮದರ್ಶಿಗಳು, ಹಾಲಿ ಧರ್ಮದರ್ಶಿಗಳು ಜನಪ್ರತಿನಿಧಿಗಳ ಗಮನ ಸೆಳೆದು ಗ್ರಾಮಸ್ಥರ ಅಹವಾಲಿಗೆ ಸ್ಪಂದಿಸಬೇಕೆಂದು ಆಗ್ರಹಿಸಿದ್ದರು.

ವಿನೂತನ ಮಾದರಿಯ ಭೋಜನಶಾಲೆ
21 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಭೋಜನಶಾಲೆಯಲ್ಲಿ ಏಕಕಾಲದಲ್ಲಿ 1ಸಾವಿರ ಭಕ್ತರು ಅನ್ನಪ್ರಸಾದ ಸ್ವೀಕರಿಸುವ ರೀತಿಯಲ್ಲಿ ನಿರ್ಮಿಸಲಾಗುತ್ತಿದೆ. ಕುರ್ಚಿಯಲ್ಲಿ ಕುಳಿತು ಭೋಜನ ಸ್ವೀಕರಿಸುವ ಪದ್ಧತಿ ಅಳವಡಿಸಲಾಗುತ್ತಿದೆ. ಆಗಮಿಸುವ ಭಕ್ತರಿಗೆ ವಿಶ್ರಾಂತಿಗಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವುದರೊಂದಿಗೆ ತಾಯಂದಿರಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿ ಒಳಗೊಂಡು ವಿನೂತನ ಮಾದರಿಯ ಭೋಜನ ಶಾಲೆಯಾಗಿ ಮೂಡಲಿದೆ.

LEAVE A REPLY

Please enter your comment!
Please enter your name here