Home ಧಾರ್ಮಿಕ ಸುದ್ದಿ ಕೊಲ್ಲೂರು: ಶತಚಂಡಿಯಾಗ

ಕೊಲ್ಲೂರು: ಶತಚಂಡಿಯಾಗ

98
0
SHARE

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಜನ್ಮಾಷ್ಟಮಿ ಜೂ. 10 ರಂದು ನಡೆಯಲಿದ್ದು ಆ ಪ್ರಯುಕ್ತ ದೇಗುಲದಲ್ಲಿ ಲೋಕಕಲ್ಯಾಣಾರ್ಥ ಶತಚಂಡಿಯಾಗ ನಡೆಯಲಿದೆ.

ಅರ್ಚಕರ ಸೇವೆ
ದೇಗುಲದ ಅರ್ಚಕರ ಪ್ರಾಯೋಜಕತ್ವದಲ್ಲಿ ಶ್ರೀ ದೇವಿಯ ಜನ್ಮಾಷ್ಟಮಿಯಂದು ಶತಚಂಡಿಯಾಗ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮ ವೀಕ್ಷಿಸಲು ಕರ್ನಾಟಕ ಸಹಿತ ದಕ್ಷಿಣದ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಶತಚಂಡಿಯಾಗದೊಡನೆ ಸಣ್ಣ ರಥೋತ್ಸವ ನಡೆಯುವುದು ವಿಶೇಷತೆ.

ದೇವಿಗೆ ಸಂಗೀತಾರ್ಚನೆ
ಕೇರಳದ ವಿಶೇಷ ನುರಿತ ತಂಡಗಳಿಂದ ಇಲ್ಲಿನ ಸ್ವರ್ಣಮುಖೀ ಸಭಾಭವನದಲ್ಲಿ ಬೆಳಗ್ಗೆ 5 ಗಂಡೆಯಿಂದ ರಾತ್ರಿ 9ರ ತನಕ ಭರತನಾಟ್ಯಂ, ಕೂಚುಪುಡಿ, ಕಥಕ್ಕಳಿ, ಶಾಸ್ತ್ರೀಯ ಸಂಗೀತ ಸಹಿತ ಭಕ್ತಿ ಗೀತೆಯೊಂದಿಗೆ ವಾಗ್ದೇವಿಯ ಆರಾಧನಾ ಮಹೋತ್ಸವ ನಡೆಯಲಿದೆ.

LEAVE A REPLY

Please enter your comment!
Please enter your name here