Home ಧಾರ್ಮಿಕ ಸುದ್ದಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲ-ಶರನ್ನವರಾತ್ರಿ ಮಹೋತ್ಸವ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲ-ಶರನ್ನವರಾತ್ರಿ ಮಹೋತ್ಸವ

2867
0
SHARE

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಸೆ. 29ರಿಂದ ಅ. 8ರ ತನಕ ನವರಾತ್ರಿ ಉತ್ಸವ ನಡೆಯಲಿದ್ದು ಆಗಮಿಸುವ ಭಕ್ತರಿಗೆ ಸೌಕರ್ಯ ಒದಗಿಸುವ ಸಲುವಾಗಿ ಸಕಲ ಸಿದ್ಧತೆ ಭರದಿಂದ ಸಾಗುತ್ತಿದೆ.

ದಕ್ಷಿಣ ಭಾರತದ ನಾನಾ ರಾಜ್ಯಗಳಿಂದ ಆಗಮಿಸುವ ಭಕ್ತರಿಗೆ ವಿಜಯದಶಮಿಯಂದು ಸರಸ್ವತಿ ಮಂಟಪದಲ್ಲಿ ನಡೆಯಲಿರುವ ವಿದ್ಯಾರಂಭಕ್ಕೆ ಅನುಕೂಲತೆ ಕಲ್ಪಿಸಲಾಗುವುದು.

ಅ. 7ರ ಮಹಾನವಮಿಯಂದು ಬೆಳಗ್ಗೆ 11.30ಕ್ಕೆ ಚಂಡಿಕಾ ಯಾಗ ನಡೆಯಲಿದೆ. ಪ್ರತಿದಿನ ಸಂಜೆ ಸ್ವರ್ಣಮುಖೀ ಸಭಾಭವನದಲ್ಲಿ ಆಹ್ವಾನಿತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ ಕುಮಾರ್‌ ಶೆಟ್ಟಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಎಚ್‌. ಕೃಷ್ಣಮೂರ್ತಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here