Home ಧಾರ್ಮಿಕ ಸುದ್ದಿ ಕೊಲ್ಲೂರಿನಲ್ಲಿ ಮಳೆಗಾಗಿ ಪರ್ಜನ್ಯ ಜಪ, ಹೋಮ

ಕೊಲ್ಲೂರಿನಲ್ಲಿ ಮಳೆಗಾಗಿ ಪರ್ಜನ್ಯ ಜಪ, ಹೋಮ

2006
0
SHARE

ಕೊಲ್ಲೂರು: ಜಿಲ್ಲೆಯಲ್ಲಿ ಹಿಂದೆಂದೂ ಕಂಡರಿಯದ ಜಲಕ್ಷಾಮ ಪರಿಹಾರಕ್ಕಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಜೂ. 6 ರಂದು ನೆರೆದ ಭಕ್ತರ ಸಮ್ಮುಖದಲ್ಲಿ ಮಳೆಗಾಗಿ ಪರ್ಜನ್ಯ ಜಪ ಹೋಮ ನಡೆಯಿತು.

ಮುಜರಾಯಿ ಇಲಾಖೆಯ ಆಶಯದಂತೆ ವೇ| ಮೂ| ಕುಮಾರ ಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ನಡೆದ ಪರ್ಜನ್ಯ ಜಪ ಹೋಮದ ನೇತೃತ್ವವನ್ನು ತಂತ್ರಿ ಮಂಜುನಾಥ ಅಡಿಗ ಅವರು ವಹಿಸಿದ್ದರು

ಈ ಸಂದರ್ಭದಲ್ಲಿ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್‌ ಕುಮಾರ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಎಚ್. ಹಾಲಪ್ಪ ಸಮಿತಿ ಸದಸ್ಯ ರಮೇಶ ಗಾಣಿಗ ಕೊಲ್ಲೂರು, ಅಧೀಕ್ಷಕ ರಾಮಕೃಷ್ಣ ಅಡಿಗ ಹಾಗೂ ಅರ್ಚಕರು, ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here