ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಪ್ರತಿದಿನ ರಾಜ್ಯ, ಹೊರರಾಜ್ಯ ಅಲ್ಲದೇ ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ. ಕೊರೊನಾ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಾ. 14ರಿಂದ ಮುಂದಿನ ಒಂದು ವಾರದ ತನಕ ಭಕ್ತರು ತಮ್ಮ ಪ್ರವಾಸವನ್ನು ಮುಂದೂಡ ಬೇಕು ಎಂದು ಕೋರಲಾಗಿದೆ.
ಕೊಲ್ಲೂರು ಜಾತ್ರೆ ಸಮೀಪಿಸುತ್ತಿರುವಂತೆ ಶ್ರೀ ದೇವಿಯ ದರ್ಶನಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆದರೆ ಈ ಬಾರಿ ಅನಿವಾರ್ಯತೆ ಸೃಷ್ಟಿಯಾಗಿರುವುದರಿಂದ ರಾಜ್ಯ ಸರಕಾರದ ಆದೇಶದಂತೆ ಭಕ್ತರು ಸೂಚನೆಗಳನ್ನು ಪಾಲಿಸಬೇಕು ಎಂದು ದೇಗುಲದ ಕಾರ್ಯನಿರ್ವಹಣಾ ಧಿಕಾರಿ ಅರವಿಂದ ಎ. ಸುತಗುಂಡಿ ತಿಳಿಸಿದ್ದಾರೆ.