Home ಧಾರ್ಮಿಕ ಕಾರ್ಯಕ್ರಮ ಕೊಲ್ಲೂರು: ಸಹಸ್ರ ಚಂಡಿಕಾ ಯಾಗ ಆರಂಭ

ಕೊಲ್ಲೂರು: ಸಹಸ್ರ ಚಂಡಿಕಾ ಯಾಗ ಆರಂಭ

2085
0
SHARE

ಕೊಲ್ಲೂರು: ಕೊಲ್ಲೂರಿನಲ್ಲಿ ಟಿವಿಎಸ್‌ ಕಂಪೆನಿಯ ಆಡಳಿತ ನಿರ್ದೇಶಕ ವೇಣು ಶ್ರೀನಿವಾಸನ್‌ ಅವರ ನೇತೃತ್ವದಲ್ಲಿ ಸಹಸ್ರ ಚಂಡಿಕಾ ಯಾಗ ಆರಂಭಗೊಂಡಿದೆ. ಜ. 18ರಿಂದ ಜ. 23ರ ವರೆಗೆ ನಡೆಯಲಿರುವ ಸಹಸ್ರ ಚಂಡಿಕಾ ಯಾಗದಲ್ಲಿ 150 ಮಂದಿ ಪುರೋಹಿತರ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳು ಶಾಸ್ತ್ರೋಕ್ತವಾಗಿ ನಡೆಯುತ್ತಿವೆ.

ಕೊಲ್ಲೂರಿನಲ್ಲಿ ಇತ್ತೀಚೆಗೆ ಇಲ್ಲಿನ ಚರಿತ್ರೆಯಲ್ಲಿಯೇ ಪ್ರಥಮವಾಗಿ ನಡೆದ ಅಯುತ ಚಂಡಿಕಾ ಯಾಗದ ಬೆನ್ನಲ್ಲೇ ಸಹಸ್ರ ಚಂಡಿಕಾ ಯಾಗ ನಡೆಯುತ್ತಿರುವುದು ಭಕ್ತರಲ್ಲಿ ಹೊಸ ಚೆ„ತನ್ಯ ತುಂಬುತ್ತಿದೆ. ಕೊಲ್ಲೂರು ದೇಗುಲದ ಅರ್ಚಕ ಡಾ| ಕೆ.ಎನ್‌. ನರಸಿಂಹ ಅಡಿಗ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಯಾಗದ ಸಂಕಲ್ಪದಲ್ಲಿ ಟಿವಿಎಸ್‌ ಕಂಪೆನಿಯ ಸಹ ಆಡಳಿತ ನಿರ್ದೇಶಕ ಸುದರ್ಶನ್‌ ಪಾಲ್ಗೊಂಡರು.

ಕೊಲ್ಲೂರು ದೇಗುಲದ ಸನಿಹದಲ್ಲಿ ನಡೆಯುತ್ತಿರುವ ಯಾಗದಲ್ಲಿ ದೇಗುಲದ ಕಾರ್ಯನಿರ್ವಹಣಾಧಿಕಾರಿ ಜನಾರ್ದನ್‌, ವ್ಯವಸ್ಥಾಪನ ಸಮಿತಿ ಸದದ್ಯರಾದ ರಮೇಶ್‌ ಗಾಣಿಗ ಕೊಲ್ಲೂರು, ವಂಡಬಳ್ಳಿ ಜಯರಾಮ ಶೆಟ್ಟಿ, ಅಭಿಲಾಷ್‌, ನರಸಿಂಹ ಹಳಗೇರಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here