ಉಡುಪಿ: ಮರ್ಣೆ ಕೊಡಂಗಳ ಕೊಲಪು ಶ್ರೀ ಮಹಾವಿಷ್ಣುಮೂರ್ತಿ ದೇಗುಲದಲ್ಲಿ ವೇ|ಮೂ| ಅಲೆೆವೂರು ಮೋಹನ ತಂತ್ರಿ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ಶಿಖರ ಪ್ರತಿಷ್ಠೆ, ಬಿಂಬ ಪ್ರತಿಷ್ಠೆ, ಶ್ರೀ ಲಕ್ಷ್ಮೀ ನಾರಾಯಣ ಹೃದಯಯಾಗ, ಸಂಜೆ ಕಲಶ ಮಂಟಪಕ್ಕೆ ಮಂಟಪ ಸಂಸ್ಕಾರ, ದುರ್ಗಾ ನಮಸ್ಕಾರ ಪೂಜೆಯೊಂದಿಗೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಸಂಪನ್ನಗೊಂಡಿತು.
ಜೂ. 23: ಬ್ರಹ್ಮಕಲಶೋತ್ಸವ
ಜೂ. 22ರಂದು ಶ್ರೀ ನಾಗದೇವರಿಗೆ ಆಶ್ಲೇಷಾಬಲಿ, ಸಂದರ್ಶನ, ಪಂಚ ವಿಂಶತಿ ದ್ರವ್ಯಮೀಳಿತ 301 ಕಲಶಾಧಿವಾಸ, ಅಧಿವಾಸ ಯಾಗ, ಜೂ. 23ರಂದು ವಿಷ್ಣುಯಾಗ, ಬ್ರಹ್ಮಕುಂಭಾಭಿಷೇಕ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ, ರಂಗಪೂಜೆ, ಜೂ. 24ರಂದು ಶ್ರೀ ಸೂಕ್ತಯಾಗ, ಸಂಪ್ರೋಕ್ಷಣೆ ನಡೆಯಲಿದೆ ಎಂದು ದೇಗುಲದ ಪ್ರಕಟನೆ ತಿಳಿಸಿದೆ.