ಕೊಕ್ಕಡ : ಆರೋಗ್ಯ ಸಂಬಂಧಿ ಹರಕೆಗಳಿಗೆ ಪ್ರಸಿದ್ಧವಾದ ಧನ್ವಂತರಿ ಕ್ಷೇತ್ರ ಕೊಕ್ಕಡ ಸೀಮೆಯೊಡೆಯ ವೈದ್ಯನಾಥ – ವಿಷ್ಣುಮೂರ್ತಿ ದೇವರ ವಾರ್ಷಿಕ ಜಾತ್ರೆ ಪ್ರಯುಕ್ತ ದರ್ಶನ ಬಲಿ, ಚಂದ್ರಮಂಡಲ ರಥೋತ್ಸವ, ರಾತ್ರಿ ಮಹಾರಥೋತ್ಸವ ನಡೆದವು.
ನೀಲೇಶ್ವರ ಎಡೆಮನೆ ತಂತ್ರಿಗಳು ನೇತೃತ್ವ ವಹಿಸಿದ್ದರು. ನಿತ್ಯ ಪ್ರತ್ಯೇಕ ಕಟ್ಟೆಪೂಜೆಗಳು, ಪೇಟೆ ಸವಾರಿಯಂತಹ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು. ಮಧ್ಯಾಹ್ನ ದರ್ಶನ ಬಲಿ ನಡೆದು ಬಟ್ಟಲು ಕಾಣಿಕೆ ಪ್ರಸಾದ ವಿತರಣೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.