ಬಸವಕಲ್ಯಾಣ: ಕೋಹಿನೂರ ಗ್ರಾಮದ ಆರಾಧ್ಯ ದೈವ ಸದ್ಗುರು ಶ್ರೀ ಚೆನ್ನಮಲ್ಲೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಪಲ್ಲಕ್ಕಿ ಉತ್ಸವಕ್ಕೆ ಹಾರಕೂಡದ ಶ್ರೀ ಚೆನ್ನವೀರ ಶಿವಾಚಾರ್ಯರರು ಚಾಲನೆ ನೀಡಿದರು.
ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿದ ಮೆರವಣಿಗೆಯಲ್ಲಿ ಭಜನೆ ಕೀರ್ತನೆ ಕಾರ್ಯಕ್ರಮಗಳ ನಡೆದವು. ಜಿಪಂ ಆನಂದ ಪಾಟೀಲ, ಗ್ರಾಪಂ ಅಧ್ಯಕ್ಷೆ ಸಂಗೀತಾ ಎಸ್.ಸಂತಾಜಿ, ಉಪಾಧ್ಯಕ್ಷ ಶಿವಾನಂದ ತೋಬರೆ, ಜಾತ್ರಾ ಕಮಿಟಿ ಅಧ್ಯಕ್ಷ ವೀರಣ್ಣಾ ಮೂಲಗೆ, ಗ್ರಾಪಂ ಸದಸ್ಯ ಶಿವಾ ಕಲೋಜಿ, ಶಿವಶರಣಪ್ಪಾ ಸಂತಾಜಿ, ಶಿವಾನಂದ ಜಮಾದಾರ್, ಅಂಬಾರಾಯ ಉಗಾಜಿ, ಮಲ್ಲಿನಾಥ ಹಿರೇಮಠ, ಡಾ| ಅಮರನಾಥ ಜಮಾದಾರ್, ದೇವಿದಾಸ್ ಸಜ್ಜನ, ಕರಬಸಯ್ನಾ ಸ್ವಾಮಿ, ಮಹಾದೇವ ಬಿಲಗುಂದೆ ಇದ್ದರು.