Home ಧಾರ್ಮಿಕ ಕಾರ್ಯಕ್ರಮ ಕುಡುಪು ಶ್ರೀ ಅನಂತ ಪದ್ಮನಾಭ ಕ್ಷೇತ್ರದಲ್ಲಿ ನೇಮ

ಕುಡುಪು ಶ್ರೀ ಅನಂತ ಪದ್ಮನಾಭ ಕ್ಷೇತ್ರದಲ್ಲಿ ನೇಮ

807
0
SHARE
ಶ್ರೀ ಸತ್ಯನಾಥ ಜಾರಂದಾಯ, ಬಂಟ ಮತ್ತು ಧೂಮಾವತಿ ಬಂಟ ದೈವಗಳಿಗೆ ಏಕಕಾಲದಲ್ಲಿ ಗಗ್ಗರ ಸೇವೆ, ನೇಮ ನಡೆಯಿತು.

ಮಹಾನಗರ: ಕುಡುಪು ಶ್ರೀ ಅನಂತ ಪದ್ಮನಾಭ ಕ್ಷೇತ್ರದಲ್ಲಿ ವೈಭವದಿಂದ ನಡೆದ ಬ್ರಹ್ಮಕಲಶೋತ್ಸವದ ಸಲುವಾಗಿ ಶ್ರೀ ಕ್ಷೇತ್ರ ಪರಿವಾರ ದೈವಗಳ ಭಂಡಾರ ಏರಿ ಬುಧವಾರ ಶ್ರೀ ಸತ್ಯನಾಥ ಜಾರಂದಾಯ, ಬಂಟ ಮತ್ತು ಧೂಮಾವತಿ ಬಂಟ ದೈವಗಳಿಗೆ ಏಕಕಾಲದಲ್ಲಿ ಗಗ್ಗರ ಸೇವೆ, ನೇಮ ನಡೆಯಿತು. ಇದಾದ ಬಳಿಕ ಪಿಲಿಚಂಡಿ ದೈವಗಳ ನೇಮ ಕ್ಷೇತ್ರದ ಭದ್ರಾ ಸರಸ್ವತಿ ಸರೋವರದ ಮುಂಭಾಗದ ರಾಜಾಂಗಣದಲ್ಲಿ ಜರಗಿತು.

ಈ ಸಂದರ್ಭ ಕ್ಷೇತ್ರದ ಆನುವಂಶಿಕ ಮೊಕ್ತೇಸರ ನರಸಿಂಹ ತಂತ್ರಿ, ಪವಿತ್ರಪಾಣಿ ಬಾಲಕೃಷ್ಣ ಕಾರಂತ, ಆನುವಂಶಿಕ ಅರ್ಚಕ ಮನೋಹರ ಭಟ್‌, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಸಂಚಾಲಕ ಕೃಷ್ಣರಾಜ ತಂತ್ರಿ, ಪ್ರಧಾನ ಕಾರ್ಯದರ್ಶಿ ಸೃಜನ್‌ದಾಸ್‌ ಕುಡುಪು, ಕಾರ್ಯನಿರ್ವಹಣಾಧಿಕಾರಿ ಅರವಿಂದ ಎ. ಸುತಗುಂಡಿ, ಕಾರ್ಪೊರೇಟರ್‌ ಭಾಸ್ಕರ್‌ ಕೆ. ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here