Home ಧಾರ್ಮಿಕ ಸುದ್ದಿ ಕುಡುಪು: ವಿಷ್ಣು ಸಹಸ್ರನಾಮ ಪಾರಾಯಣ

ಕುಡುಪು: ವಿಷ್ಣು ಸಹಸ್ರನಾಮ ಪಾರಾಯಣ

1649
0
SHARE

ಮಹಾನಗರ: ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನ ಕ್ಷೇತ್ರ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ದೇವಸ್ಥಾನದ ಆಡಳಿತ ಮಂಡಳಿ, ಊರ ಪರವೂರ ಹತ್ತು ಸಮಸ್ತರ ವತಿಯಿಂದ ಲೋಕ ಕಲ್ಯಾಣಾರ್ಥ ಸುಭಿಕ್ಷೆ ಮಳೆ, ಬೆಳೆ ಫಲಪ್ರಾಪ್ತಿಗಾಗಿ ಬುಧವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ವಿಷ್ಣು ಸಹಸ್ರನಾಮ ಪಾರಾಯಣ ನಡೆಸಲಾಯಿತು.

ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಕೆ. ಕೃಷ್ಣರಾಜ ತಂತ್ರಿ ಅವರ ನೇತೃತ್ವದಲ್ಲಿ ಕ್ಷೇತ್ರದ ಪವಿತ್ರಪಾಣಿ, ಆನುವಂಶಿಕ ಮೊಕ್ತೇಸರರಾದ ಬಾಲಕೃಷ್ಣ ಕಾರಂತ, ಕ್ಷೇತ್ರದ ಮೊಕ್ತೇಸರ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಭಾಸ್ಕರ ಕೆ., ಶಾಸಕ ವೇದವ್ಯಾಸ್‌ ಕಾಮತ್‌ ಸಮ್ಮುಖದಲ್ಲಿ ವಿಶೇಷ ಪ್ರಾರ್ಥನೆ ಸಮರ್ಪಿಸಲಾಯಿತು.

ಜೀರ್ಣೋದ್ಧಾರ ಸಮಿತಿಯ ಜತೆ ಕಾರ್ಯದರ್ಶಿ ಸುಜನ್‌ದಾಸ್‌ ಕುಡುಪು, ವಾಸುದೇವ ರಾವ್‌ ಕುಡುಪು, ಅಜಯ್‌ ಮಂಗಳನಗರ, ಅನಿಲ್ ಕುಮಾರ್‌, ಮಂಜುಳಾ ಅನಿಲ್ ಕುಮಾರ್‌, ಅರ್ಚಕರಾದ ರವಿಭಟ್ ಕೌಡೂರು, ಸೋಮಶೇಖರ್‌ ಭಟ್, ರಾಘವೇಂದ್ರ ಭಟ್ ಕುಡುಪು, ಅನಂತ ರಾವ್‌ ಕುಡುಪು, ಅರವಿಂದ ತಂತ್ರಿ, ಶಶಿಕಲಾ ದಿನೇಶ್‌ ಪೆಜತ್ತಾಯ, ಶೋಭಾ ರಾಮಮೂರ್ತಿ, ಶಶಿಕಲಾ ತಂತ್ರಿ, ಶ್ರೀಮತಿ ಭಟ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here