ಸುಳ್ಯ: ಐವರ್ನಾಡು ಗ್ರಾಮದ ಕೋಡ್ತಿಲು ಶ್ರೀ ಧರ್ಮದೈವ ಮತ್ತು ಸಹ ಪರಿವಾರ ದೈವಗಳ ನೇಮ ನಡೆಯಿತು.
ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಗಣಹೋಮ ಮತ್ತು ಹರಿಸೇವೆ ಮತ್ತು ನಾಗತಂಬಿಲ, ರಾತ್ರಿ ಭಂಡಾರ ತೆಗೆಯುವುದು ಅನಂತರ ಕಲ್ಲುರ್ಟಿ, ರಕ್ತೇಶ್ವರಿ, ರುದ್ರಾಂಡಿ, ಪಿಲಿಭೂತ, ಕುಪ್ಪೆ ಪಂಜುರ್ಲಿ ದೈವ ನೇಮ ನಡಾವಳಿ, ಮಾರಿಕಳಕ್ಕೆ ಹೋಗುವುದು, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಿತು. ಅನಂತರ ವರ್ಣಾರ ಪಂಜುರ್ಲಿ, ಕೊಡಮಂತ್ತಾಯ, ಗುಳಿಗ, ಅಂಗಾರ, ಬಾಕುಡ ದೈವಗಳ ನೇಮ ನಡಾವಳಿ ನಡೆಯಿತು.
ಕೋಡ್ತಿಲು ಕುಟುಂಬದವರು, ಊರಿನ, ಪರವೂರಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.