Home ಧಾರ್ಮಿಕ ಕಾರ್ಯಕ್ರಮ ಕೊಡ್ಲಿಪೇಟೆ ರುಕ್ಮಿಣಿ ಪಾಂಡುರಂಗ ದೇಗುಲ ಕಲಶ‌ ಪ್ರತಿಷ್ಠಾಪನ ಸಂಪನ್ನ

ಕೊಡ್ಲಿಪೇಟೆ ರುಕ್ಮಿಣಿ ಪಾಂಡುರಂಗ ದೇಗುಲ ಕಲಶ‌ ಪ್ರತಿಷ್ಠಾಪನ ಸಂಪನ್ನ

87
0
SHARE

ಶನಿವಾರಸಂತೆ:-ಸಮಿಪದ ಕೊಡ್ಲಿಪೇಟೆ ರುಕ್ಮಿಣಿ ಪಾಂಡುರಂಗ ದೇವಾಸ್ಥಾನ ಕಳಸ ಪ್ರತಿಷ್ಠಾಪನೆ ಮತ್ತು ಜೀರ್ಣೋದ್ದಾರ ಹಾಗೂ ಪೂಜಾ ಮಹೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು.

ಕೊಡ್ಲಿಪೇಟೆ ನಾಮದೇವ ಸಿಂಪಿ ಸಮಾಜದ ವತಿಯಿಂದ ಪಟ್ಟಣದ ಶ್ರೀ ರುಕ್ಮಿಣಿ ಪಾಂಡುರಂಗ ದೇವಾಸ್ಥಾನ ಕಳಸ ಪ್ರತಿಷ್ಠಾಪನೆ, ದೇವಾಸ್ಥಾನದ ಜೀರ್ಣೋದ್ದಾರ ಹಾಗೂ ಪೂಜಾ ಮಹೋತ್ಸವ ಕಾರ್ಯಕ್ರಮವನ್ನು ಜೂ5 ಮತ್ತು 6 ರಂದು ಹಮ್ಮಿಕೊಳ್ಳಲಾಯಿತು.

ಜೂ5 ರಂದು ದೇವಾಸ್ಥಾನದ ದೇವತಾಕಾರ್ಯದಲ್ಲಿ ಬೆಳಗ್ಗೆ 5 ಗಂಟೆಯಿಂದ ಪ್ರಾರ್ಥನೆ, ಸ್ಥಳ ಶುದ್ದಿ, ಸುದರ್ಶನಹೋಮ, ವಾಸ್ತುಹೋಮ, ವಾಸ್ತುಬಲಿ, ದಿಕ್ಷಾಲಬಲಿ ವಿದಿ ವಿಧಾನವನ್ನು ನೆರವೇರಿಸಲಾಯಿತು. ಮಧ್ಯಾಹ್ನ 3 ಗಂಟೆಯಿಂದ ಪೋತಿ ಸ್ಥಾಪನೆ, ಜ್ಞಾನೇಶ್ವರಿ ಪಾರಾಯಣ, ಭಜನೆ ಮತ್ತು ಕೀರ್ತನೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಜೂ6 ರಂದು ಬೆಳಗ್ಗೆ 6 ಗಂಟೆಯಿಂದ ದೇವರ ಗಂಗಾಪೂಜೆಗೆ ಪಟ್ಟಣದ ಪ್ರಮುಖ ಬೀದಿ ಗಳಲ್ಲಿ ಮಂಗಳ ವಾದ್ಯಗೋಷ್ಠಿಯೊಂದಿಗೆ ಕುಂಭಮೆರವಣಿಗೆಯಲ್ಲಿ ಸಾಗಿದರು.

ಅನಂತರ ಬೆಳಗ್ಗೆ 6-30 ರಿಂದ ದೇವಸ್ಥಾನದಲ್ಲಿ ಶ್ರೀ ಗಣಪತಿ ಹೋಮ, ಪ್ರತಿಷ್ಠಾಹೋಮ ನೆರವೇರಿಸಲಾಯಿತು. ಬೆಳಗ್ಗೆ 8-45ಕ್ಕೆ ಶ್ರೀ ರುಕ್ಮಿಣಿ ಪಾಂಡುರಂಗ ಸ್ವಾಮಿಯ ಪುನರ್‌ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶಾಭಿಷೇಕ ಕಾರ್ಯವನ್ನು ನೆರವೇರಿಸಲಾಯಿತು.

ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗದೊಂದಿಗೆ ದೇವಸ್ಥಾನದ ಕಳಸ ಪ್ರತಿಷ್ಠಾಪನೆ ಮತ್ತು ಜೀರ್ಣೋದ್ದಾರ ಪೂಜ ಮಹೋತ್ಸವ ಕಾರ್ಯ ಸಂಪನ್ನಗೊಂಡಿತು. ಶ್ರೀ ರುಕ್ಮಿಣಿ ಪಾಂಡುರಂಗ ಸ್ವಾಮಿಯ ಪುನರ್‌ ಪ್ರತಿಷ್ಠಾಪನಾ ಅಷ್ಟಬಂಧ, ಬ್ರಹ್ಮಕಲಶೋತ್ಸವ ವಿದಿ ವಿಧಾನವನ್ನು ಪುತ್ತೂರಿನ ಕೆಮ್ಮಿಂಜಿ ವೇದಮೂರ್ತಿ ಬ್ರಹ್ಮಶ್ರೀ ತಂತ್ರಿ ಸುಬ್ರಮಣ್ಯ ಬಳ್ಳಕ್ಕುರಾಯ ಅವರ ನೇತೃತ್ವದಲ್ಲಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ದಾಸೋಹವನ್ನು ಏರ್ಪಡಿಸಲಾಗಿತು.

LEAVE A REPLY

Please enter your comment!
Please enter your name here