ಮಂಜಲ್ಪಡು : ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಮಾ. 30ರಿಂದ ಎ. 1ರ ವರೆಗೆ ನಡೆಯಲಿರುವ ವರ್ಷಾವ ಧಿ ಜಾತ್ರೆಯ ಪ್ರಯುಕ್ತ ಮಾ. 4ರಂದು ದೇವಾಲಯದಲ್ಲಿ ಚಪ್ಪರ ಮುಹೂರ್ತ ನಡೆಯಿತು. ಬೆಳಗ್ಗೆ ದೇವಾಲಯದ ಪ್ರಧಾನ ಅರ್ಚಕ ಎನ್. ಕೃಷ್ಣ ಬಡೆಕಿಲ್ಲಾಯ ನೇತೃತ್ವದಲ್ಲಿ ದೇವರಿಗೆ ವಿಶೇಷ ಪ್ರಾರ್ಥನೆ ನಡೆಸಿದ ಬಳಿಕ ಚಪ್ಪರ ಮುಹೂರ್ತ ನೆರವೇರಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಜಾತ್ರೆ ಪ್ರಯುಕ್ತ ಮಾ. 23ರಂದು ಗೊನೆ ಕಡಿಯುವ ಮುಹೂರ್ತ ನಡೆಯಲಿದೆ.