ಕಬಕ : ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ 2022ಕ್ಕೆ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಈ ಅವಧಿಯಲ್ಲಿ ಭಕ್ತರ ಸಹಕಾರದೊಂದಿಗೆ ನೂತನ ಧ್ವಜಸ್ತಂಭ ಹಾಗೂ ಬ್ರಹ್ಮರಥದ ಕೆಲಸಗಳನ್ನು ಪೂರ್ಣಗೊಳಿಸಿ, ದೇವರಿಗೆ ಸಮರ್ಪಿಸಲಾಗುವುದು ಎಂದು ಅಭಿವೃದ್ಧಿ ಸಮಿತಿಯ ಪಿ. ಮಂಜಪ್ಪ ಹೇಳಿದರು.
ದೇವಸ್ಥಾನದಲ್ಲಿ ನಿರ್ಮಾಣ ಗೊಳ್ಳಲಿ ರುವ ನೂತನ ಧ್ವಜಸ್ತಂಭ ಹಾಗೂ ಬ್ರಹ್ಮರಥದ ಕುರಿತು ನಡೆದ ಗ್ರಾಮಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೇವಾಲಯದಲ್ಲಿ ಈ ತನಕ ಮೂರು ಬ್ರಹ್ಮಕಲಶೋತ್ಸವಗಳು ನಡೆದಿವೆ. ಮುಂದಿನ ಬ್ರಹ್ಮಕಲಶೋತ್ಸವ 2022ರಲ್ಲಿ ನಡೆಯಲಿದೆ. ಈ ಮೂರು ವರ್ಷಗಳ ಅವಧಿಯಲ್ಲಿ ಬ್ರಹ್ಮರಥ ಹಾಗೂ ಧ್ವಜಸ್ತಂಭ ನಿರ್ಮಾಣ ಮಾಡಲಾಗುವುದು. ಭಕ್ತರು ಗರಿಷ್ಠ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಸಂತೋಷ್ ಕುಮಾರ್ ಕಾಯರ್ ಮಜಲ್ ಮಾತನಾಡಿ, ದಾನಿಗಳು ಘೋಷಣೆ ಮಾಡಿರುವಂತಹ ಮರ ವನ್ನು ಆದಷ್ಟು ಬೇಗ ದೇವಾಲಯಕ್ಕೆ ತಲುಪಿಸಬೇಕೆಂದು ಹೇಳಿದರು.
ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜನಾರ್ದನ ಎರ್ಕಡಿತ್ತಾಯ ಪ್ರಾಸ್ತಾಕವಾಗಿ ಮಾತನಾಡಿದರು. ಸಮಿತಿ ಸದಸ್ಯ ಗಿರಿಧರ ಗೌಡ ಗೋಮುಖ ಸ್ವಾಗತಿಸಿ, ಅಭಿವೃದ್ಧಿ ಸಮಿತಿ ಜತೆ ಕಾರ್ಯ ದರ್ಶಿ ಮಹಾಬಲ ಗೌಡ ಗಡಿಮಾರು ವಂದಿಸಿದರು.
ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಮನೋಹರ್ ಕೊಳಕ್ಕಿಮಾರ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಸುಬ್ರಹ್ಮಣ್ಯ ಗೌಡ ಹನಿಯೂರು, ಪುರುಷೋತ್ತಮ ನಾೖಕ್, ಸುಧೀರ್ ಪ್ರಸಾದ್ ನಾೖಕ್, ಚಂದ್ರಶೇಖರ ಕುದ್ಮಾನ್, ಲೀಲಾವತಿ, ಸುಂದರಿ ಮತ್ತಿತರರು ಉಪಸ್ಥಿತರಿದ್ದರು. ಗ್ರಾಮಸ್ಥರು ಅನಿಸಿಕೆ ವ್ಯಕ್ತಪಡಿಸಿದರು.
ನೂತನ ಬ್ರಹ್ಮರಥ ಹಾಗೂ ಧ್ವಜಸ್ತಂಭ ನಿರ್ಮಾಣಕ್ಕೆ ಸುಮಾರು 1.50 ಕೋಟಿ ರೂ. ಖರ್ಚು ತಗುಲಬಹುದು ಎಂದು ಅಂದಾಜಿಸಲಾಗಿದೆ. ಸಭೆಯಲ್ಲಿ ಸುಮಾರು 14 ಲಕ್ಷ ರೂ.ಗಳಷ್ಟು ದೇಣಿಗೆಯ ವಾಗ್ಧಾನ ಭಕ್ತರಿಂದ ಬಂದಿದೆ ಎಂದು ಅಭಿವೃದ್ಧಿ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.
ನೂತನ ಬ್ರಹ್ಮರಥ ಹಾಗೂ ಧ್ವಜಸ್ತಂಭ ನಿರ್ಮಾಣಕ್ಕೆ ಸುಮಾರು 1.50 ಕೋಟಿ ರೂ. ಖರ್ಚು ತಗುಲಬಹುದು ಎಂದು ಅಂದಾಜಿಸಲಾಗಿದೆ. ಸಭೆಯಲ್ಲಿ ಸುಮಾರು 14 ಲಕ್ಷ ರೂ.ಗಳಷ್ಟು ದೇಣಿಗೆಯ ವಾಗ್ಧಾನ ಭಕ್ತರಿಂದ ಬಂದಿದೆ ಎಂದು ಅಭಿವೃದ್ಧಿ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.