Home ಧಾರ್ಮಿಕ ಸುದ್ದಿ ಬ್ರಹ್ಮಕಲಶೋತ್ಸವ ಅನ್ನಪ್ರಸಾದ: ಬಾಕಿಮಾರು ಗದ್ದೆಯಲ್ಲಿ ಕಂಡದಕೋರಿ

ಬ್ರಹ್ಮಕಲಶೋತ್ಸವ ಅನ್ನಪ್ರಸಾದ: ಬಾಕಿಮಾರು ಗದ್ದೆಯಲ್ಲಿ ಕಂಡದಕೋರಿ

"ನಮ್ಮ ನಡಿಗೆ ಗದ್ದೆ ಕಡೆಗೆ -ನಮ್ಮ ಮನದ ದೇವಿಗೆ ನಮ್ಮ ಮನೆಯ ಅಕ್ಕಿ' ವಿಶೇಷ ಯೋಜನೆ

1431
0
SHARE

ಕೋಡಿಂಬಾಡಿ: ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನ ಬ್ರಹ್ಮ ಕಲಶೋತ್ಸವದ ಅನ್ನಪ್ರಸಾದದ ಅಕ್ಕಿಗಾಗಿ “ನಮ್ಮ ನಡಿಗೆ ಗದ್ದೆ ಕಡೆಗೆ – ನಮ್ಮ ಮನದ ದೇವಿಗೆ ನಮ್ಮ ಮನೆಯ ಅಕ್ಕಿ’ ವಿಶೇಷ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು, ಬರೆಮೇಲು ಪಲ್ಲತ್ತಾರು ಬಾಕಿಮಾರು ಗದ್ದೆಯಲ್ಲಿ ನೇಜಿ ನಾಟಿ ಮಾಡುವ “ಕಂಡದ ಕೋರಿ’ ನಡೆಯಿತು.

ಸಭಾ ಕಾರ್ಯಕ್ರಮದಲ್ಲಿ ಜೀರ್ಣೋ ದ್ಧಾರ ಸಮಿತಿ ಅಧ್ಯಕ್ಷ ಅಶೋಕ್‌ ಕುಮಾರ್‌ ರೈ ಕೋಡಿಂಬಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದ ಸಂಚಾಲಕ‌ ಸದಾಶಿವ ಸಾಮಾನಿ ಸಂಪಿಗೆದಡಿ, ಶೇಖರ ಪೂಜಾರಿ ಡೆಕ್ಕಾಜೆ, ಪದ್ಮಾವತಿ ಬಾಲಪ್ಪ ಪೂಜಾರಿ ಪಲ್ಲತ್ತಾರು, ವಾರಿಜಾ ಮೋನಪ್ಪ ಶೆಟ್ಟಿ ಉಪಸ್ಥಿತರಿದ್ದರು.

ಕಂಬಳದ ಕೋಣಗಳನ್ನು ಕರೆತಂದು ಕಾರ್ಯಕ್ರಮಕ್ಕೆ ಮೆರುಗು ನೀಡಿದ ಸುರೇಶ್‌ ಆಚಾರ್ಯ ಕೊಡಪಟ್ಯ ಅವರಿಗೆ ಗೌರವ ಸಲ್ಲಿಸಲಾಯಿತು. ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿರಂಜನ್‌ ರೈ ಮಠಂತಬೆಟ್ಟು, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಸಂಕಪ್ಪ ಶೆಟ್ಟಿ ಮಠಂತಬೆಟ್ಟು, ವ್ಯವಸ್ಥಾಪನ ಸಮಿತಿ ಸದಸ್ಯರಾದ ಗಂಗಾಧರ ಶೆಟ್ಟಿ ಮಠಂತಬೆಟ್ಟು, ಶ್ರೀನಿವಾಸ ನಾಯ್ಕ ದಾಸಕೋಡಿ, ಕಾರ್ಯಕ್ರಮದ ಸಂಚಾಲಕ ಮುರಳೀಧರ ರೈ ಮಠಂತಬೆಟ್ಟು, ಕುಮಾರನಾಥ್‌ ಎಸ್‌. ಪಲ್ಲತ್ತಾರು, ಜಗನ್ನಾಥ ಶೆಟ್ಟಿ ನಡುಮನೆ, ಯೋಗೀಶ್‌ ಸಾಮಾನಿ ಸಂಪಿಗೆದಡಿ, ಕರುಣಾಕರ ಪೂಜಾರಿ ಪಲ್ಲತ್ತಾರು ಪಾಲ್ಗೊಂಡರು.

ದೇವಾಲಯದ ವ್ಯವಸ್ಥಾಪನ ಸಮಿತಿ ಸದಸ್ಯ ಜಯಪ್ರಕಾಶ್‌ ಬದಿನಾರು ಸ್ವಾಗತಿಸಿ, ಮುರಳೀಧರ ರೈ ಮಠಂತಬೆಟ್ಟು ಪ್ರಸ್ತಾವನೆಗೈದರು. ನ್ಯಾಯವಾದಿ ಕುಮಾರನಾಥ ಪಲ್ಲತ್ತಾರು ವಂದಿಸಿದರು.

LEAVE A REPLY

Please enter your comment!
Please enter your name here