Home ಧಾರ್ಮಿಕ ಸುದ್ದಿ ಗುರುಪುರ ವೈದ್ಯನಾಥ ದೇವರಿಗೆ ಕೊಡಿಮರ ಸಮರ್ಪಣೆ

ಗುರುಪುರ ವೈದ್ಯನಾಥ ದೇವರಿಗೆ ಕೊಡಿಮರ ಸಮರ್ಪಣೆ

740
0
SHARE

ಗುರುಪುರ: ಇಲ್ಲಿನ ಮೂಳೂರು ವೈದ್ಯನಾಥ ದೇವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆ ನಡೆಯುತ್ತಿದ್ದು, ದೇಗುಲಕ್ಕೆ ಬೇಕಾದ ಕೊಡಿಮರವನ್ನು ಮೂಡಬಿದಿರೆ ಮಾರ್ಗವಾಗಿ ತಣದಯ ಗಂಜಿಮಠ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕೈಕಂಬದಿಂದ ಗುರುಪುರದವರೆಗೆ ಮೆರವಣಿಗೆ ಮೂಲಕ ತರಲಾಯಿತು. ನೂರಾರು ಮಂದಿ ಕಾಲ್ನಡಿಯಲ್ಲಿ ಮೆರವಣಿಗೆಯ ಮೂಲಕ ಸಾಗಿದರು.

ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಉಪಹಾರ, ಪಾನಕದ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾ ಪಂಚಾಯತ್‌ ಸದಸ್ಯ ಯು.ಪಿ. ಇಬ್ರಾಹಿಂ, ಆಡಳಿತ ಮೊಕ್ತೇಸರ ಪ್ರಮೋದ್‌ ರೈ, ದೈವಪಾತ್ರಿಗಳಾದ ಚಂದ್ರಹಾಸ ಕೌಡೂರು, ತನಿಯಪ್ಪ ಪೂಜಾರಿ, ಡಾ| ರವಿರಾಜ ಶೆಟ್ಟಿ, ಪುರಂದರ ಮಲ್ಲಿ, ಪುರುಷೋತ್ತಮ ಮಲ್ಲಿ, ತಾ.ಪಂ. ಸದಸ್ಯ ಸಚಿನ್‌ ಅಡಪ, ಪಾಂಡುರಂಗ ಪ್ರಭು, ವಿಷ್ಣು ಕಾಮತ್‌, ವಿಲಾಸ್‌ ಶೆಟ್ಟಿ, ಪದ್ಮನಾಭ ಶೆಟ್ಟಿ, ಬೆಳ್ಳಿಬೆಟ್ಟು ಸತೀಶ್‌ ಶೆಟ್ಟಿ, ತುಕರಾಮ ಪೂಜಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here