Home ಧಾರ್ಮಿಕ ಸುದ್ದಿ ಕೋಡಿಂಬಾಳ: ಮಾಲೇಶ್ವರ ವರ್ಧಂತಿ

ಕೋಡಿಂಬಾಳ: ಮಾಲೇಶ್ವರ ವರ್ಧಂತಿ

1565
0
SHARE

ಕಡಬ : ಕೋಡಿಂಬಾಳ ಗ್ರಾಮದ ಮಾಲೇಶ್ವರ ಶ್ರೀ ಮಹಾಬಲೇಶ್ವರ ಸ್ವಾಮೀ ಶ್ರೀ ವೀರಭದ್ರ ದೇವಸ್ಥಾನದ 9ನೇ ವರ್ಧಂತಿ ಮಹೋತ್ಸವ ಮಾ. 21, 22ರಂದು ನಡೆಯಿತು.

ಮಾ. 22ರಂದು ಬೆಳಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಮಹಾಗಣಪತಿ ಹೋಮ, ಪಂಚವಿಂಶತಿ ಕಲಶ ಪೂಜೆ, ರುದ್ರಾಭಿಷೇಕ, ಮಧ್ಯಾಹ್ನ ಶ್ರೀ ದೇವರಿಗೆ ಕಲಶಾಭಿಷೇಕ ಹಾಗೂ ನಾಗದೇವರಿಗೆ ಮತ್ತು ಇತರ ದೈವಗಳಿಗೆ ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಮಹಾಪೂಜೆ ಬಳಿಕ ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತಕಟ್ಟೆ ಪೂಜೆ, ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆದು ವೈದಿಕ ಮಂತ್ರಾಕ್ಷತೆ ನಡೆಯಿತು.

ಶ್ರೀ ವೀರಭದ್ರ ಸ್ವಾಮಿ ಸನ್ನಿಧಿಯಲ್ಲಿ ಬೆಳಗ್ಗೆಯಿಂದ ದೇವತಾ ಪ್ರಾರ್ಥನೆ, ಸ್ವಸ್ತಿ ಶ್ರೀ ಗಣಪತಿ ಯಾಗ, ಶ್ರೀ ವೀರಭದ್ರ ಹವನ ರುದ್ರಾಭಿಷೇಕ, ಅಷ್ಟವಿಂಶತಿ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಶ್ರೀಮಹಾಬಲೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಈಶ್ವರ ಭಟ್‌, ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಸಿದ್ದಯ್ಯ ಅವರು ಪೂಜಾ ವಿಧಿ-ವಿಧಾನ ನೆರವೇರಿಸಿದರು.

ಸೇವಾ ಟ್ರಸ್ಟ್‌ನ ಅಧ್ಯಕ್ಷ ವಿಶ್ವೇಶ್ವರ ಭಟ್‌ ಎಲಿಯೂರು, ಉಪಾಧ್ಯಕ್ಷ ಧರಣೇಂದ್ರ ಜೈನ್‌ ಬೆದ್ರಾಜೆ, ಪ್ರಧಾನ ಕಾರ್ಯದರ್ಶಿ ರಮೇಶ್‌ ರಾವ್‌ ಹೊಸಮನೆ, ಜತೆ ಕಾರ್ಯದರ್ಶಿ ಉಮೇಶ್‌ ರೈ ಹೇರಂಡ, ಕೋಶಾಧಿಕಾರಿ ಸೋಮಪ್ಪ ಕೆ. ಕಲ್ಲಂತ್ತಡ್ಕ, ಧಾರ್ಮಿಕ ಉತ್ಸವ ಸಮಿತಿ ಗೌರವಾಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಅಧ್ಯಕ್ಷ ಅಶೋಕ್‌ ಆಳ್ವ ಬೆದ್ರಾಜೆ, ಉಪಾಧ್ಯಕ್ಷ ಲೋಕಯ್ಯ ಗೌಡ ಕೊಲ್ಲೆಸಾಗು, ಜತೆ ಕಾರ್ಯದರ್ಶಿ ಪ್ರದೀಪ್‌ ಜೈನ್‌ ಮಾಲೇಶ್ವರ, ಕೋಶಾಧಿಕಾರಿ ಜಗದೀಶ್‌ ರೈ ಪಟ್ಟೆ, ಭಜನ ಮಂಡಳಿಯ ಅಧ್ಯಕ್ಷ ಹರೀಶ್‌ ಬೆದ್ರಾಜೆ, ಕಾರ್ಯದರ್ಶಿ ಶಿವಪ್ರಸಾದ್‌ ರಾವ್‌ ಹೊಸಮನೆ, ಖಜಾಂಚಿ ರಾಮಚಂದ್ರ ಕೋಲ್ಪೆ ಸಹಿತ ಆಡಳಿತ ಮಂಡಳಿ ಸೇವಾ ಟ್ರಸ್ಟ್‌, ಧಾರ್ಮಿಕ ಉತ್ಸವ ಸಮಿತಿ, ಭಜನ ಮಂಡಳಿ ಸದಸ್ಯರು, ಕಂದಾಯ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here