Home ಧಾರ್ಮಿಕ ಕಾರ್ಯಕ್ರಮ ಭಕ್ತಿ ಸಂಭ್ರಮದ ಕೊಡಿಯಾಲ್‌ ತೇರು

ಭಕ್ತಿ ಸಂಭ್ರಮದ ಕೊಡಿಯಾಲ್‌ ತೇರು

1536
0
SHARE

ಮಂಗಳೂರು: ನಗರದ ರಥಬೀದಿಯಲ್ಲಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ವೀರ ವೆಂಕಟೇಶ ದೇವರ ಬ್ರಹ್ಮರಥೋತ್ಸವ ಸಂಭ್ರಮದ ‘ಕೊಡಿಯಾಲ್‌ ತೇರು’ ಶ್ರೀ ಕಾಶೀ ಮಠ ಸಂಸ್ಥಾನದ ಶ್ರೀಮತ್‌ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಮಂಗಳವಾರ ಸಂಜೆ ಜರಗಿತು.

ರಥೋತ್ಸವದ ಪೂರ್ವದಲ್ಲಿ ದೇವಸ್ಥಾನದಲ್ಲಿ ಮಹಾ ಪ್ರಾರ್ಥನೆ ಬಳಿಕ ಪಂಚಾಮೃತ ಅಭಿಷೇಕ, ಗಂಗಾಭಿಷೇಕ, ಶತಕಲಶಾಭಿಷೇಕ, ಯಜ್ಞದ ಪೂರ್ಣಾಹುತಿ ನೆರವೇರಿತು. ಕಾಶೀ ಮಠಾಧೀಶರು ತಮ್ಮ ತಿರುಮಲ ಚಾತುರ್ಮಾಸ್ಯದ ವಿಶೇಷ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು.

LEAVE A REPLY

Please enter your comment!
Please enter your name here