Home ಧಾರ್ಮಿಕ ಸುದ್ದಿ ಕೊಡವೂರು: ಸಾಮೂಹಿಕ ಗೋಪೂಜೆ, ಗೋಉತ್ಪನ್ನ ಮಾರಾಟ

ಕೊಡವೂರು: ಸಾಮೂಹಿಕ ಗೋಪೂಜೆ, ಗೋಉತ್ಪನ್ನ ಮಾರಾಟ

1281
0
SHARE

ಮಲ್ಪೆ : ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ ಸಾಮೂಹಿಕ ಗೋಪೂಜೆ ನಡೆಯಿತು. ಭಕ್ತರಿಗೆ ಸ್ವಹಸ್ತದಿಂದ ಗೋಮಾತೆಗೆ ಪೂಜೆ, ಗೋಗ್ರಾಸ ನೀಡುವ ಅವಕಾಶವನ್ನು ಕಲ್ಪಿಸಲಾಯಿತು.

ಈ ವೇಳೆ ಗೋ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿತ್ತು. ನೂರಾರು ಭಕ್ತರು ಪಾಲ್ಗೊಂಡಿದ್ದರು. ಗೋಪೂಜೆಯಿಂದ ಸಂಗ್ರಹವಾದ ಹಣವನ್ನು ನೀಲಾವರದ ಗೋ ಶಾಲೆಗೆ ನೀಡಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ್‌ ಕೊಡವೂರು, ಸದಸ್ಯರಾದ ಜನಾರ್ದನ ಕೊಡವೂರು, ಅಡಿಗ ಕೃಷ್ಣಮೂರ್ತಿ, ಎ. ರಾಜ ಸೇರಿಗಾರ, ಸುಧಾ ಎನ್‌. ಶೆಟ್ಟಿ, ಜನನಿ ಭಾಸ್ಕರ ಭಟ್‌ ಅಗ್ರಹಾರ, ಸರೋಜಿನಿ, ಪ್ರದ್ಯೋತ ನಾವಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here