ಕೊಡೆತ್ತೂರು: ದೈವ- ದೇವಸ್ಥಾನದಂತಹ ಧಾರ್ಮಿಕ ಕ್ಷೇತ್ರಗಳು ಸಂಸ್ಕೃತಿಯ ಪ್ರತೀಕವಾಗಿದ್ದು, ಧಾರ್ಮಿಕ ತಳಹದಿಯ ಮೇಲೆ ನಿಂತಿದೆ ಎಂದು ಶಾಸಕ ಉಮನಾಥ ಕೋಟ್ಯಾನ್ ಹೇಳಿದರು.
ಮಾ. 10ರಂದು ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದಲ್ಲಿ ನಡೆದ ವಾರ್ಷಿಕ ನೇಮದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತ ನಾ ಡಿ, ಹಿಂದು ಸಮಾಜ ಯಾವ ಸಮಾಜದ ಮೇಲೂ ದಾಳಿ ಮಾಡಿದ ಇತಿಹಾಸ ಇಲ್ಲ. ಆದರೆ ಆದ ತಣ್ತೀ ನಿಷ್ಠೆ ಪೂಜೆ ಪದ್ಧತಿಯಲ್ಲಿ ವಿಶಾಲವಾದ ಪವಿತ್ರವಾದ ತಹಹದಿಯಲ್ಲಿ ಇದೆ. ಈ ಸಮಾಜವನ್ನು ಉಳಿಸಿ ಬೆಳಸುವ ಕೆಲಸ ದೈವ- ದೇವಸ್ಥಾನಗಳಿಂದ ಆಗಬೇಕು ಎಂದರು.
ಕಾರ್ಯ ಕ್ರ ಮ ದಲ್ಲಿ ದೇಹ ದಾಡ್ಯì ಮತ್ತು ಕರಾ ಟೆ ಯಲ್ಲಿ ಸಾಧನೆ ಮಾಡಿ ರುವ ದುರ್ಗಾ ಪ್ರಸಾದ್ ಶೆಟ್ಟಿ, ಶುಭಂ ಕಟೀಲು ಅವ ರನ್ನು ಸಮ್ಮಾ ನಿ ಸ ಲಾ ಯಿ ತು.
ಕಾಂತೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಪಿ. ಕೃಷ್ಣ ಮೂರ್ತಿ ಭಟ್, ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ, ಉದ್ಯಮಿ ಕಿರಣ್ ಶೆಟ್ಟಿ ಕೊಡೆತ್ತೂರು ಮಾಗಂದಡಿ, ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ಉದಯ ಕುಮಾರ್ ಆಚಾರ್ಯ, ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಮೋಹನ್ ಶೆಟ್ಟಿ ಮೂಡುದೇವಸ್ಯ ಉಪಸ್ಥಿತರಿದ್ದರು. ಸಮಿತಿಯ ದೇವಿಪ್ರಸಾದ್ ಶೆಟ್ಟಿ ಸ್ವಾಗತಿ ಸಿ ದರು. ಪ್ರಕಾಶ್ ಆಚಾರ್ ನಿರೂಪಿಸಿದರು.