ಉಡುಪಿ: ಕೊಡಂಕೂರು ವಿಶ್ವಬ್ರಾಹ್ಮಣ ಸಂಸ್ಕೃತ ವಿದ್ಯಾಪೀಠದಲ್ಲಿ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು. ಹಾಸನ ಜಿಲ್ಲೆಯ ಅರೆಮಾದನಹಳ್ಳಿ ವಿಶ್ವಬ್ರಾಹ್ಮಣ ಸಂಸ್ಥಾನ ಮಠದ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ ಅವರು ಅಧ್ಯಕ್ಷತೆ ವಹಿಸಿದ್ದರು.
ಅಲೆವೂರು ಸುಂದರ ಆಚಾರ್ಯ, ಶಶಿಕಲಾ ಪ್ರಭಾಕರ ಆಚಾರ್ಯ, ಅಲೆವೂರು ಮಾಧವ ಆಚಾರ್ಯ, ಅಲೆವೂರು ನಾಗರಾಜ ಆಚಾರ್ಯ, ಭವಾನಿ ನಾರಾಯಣ ಆಚಾರ್ಯ, ಕಾಪು ವಿಶ್ವಕರ್ಮ ಯುವ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಕಪ್ಪೆಟ್ಟು, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಉಪಸ್ಥಿತರಿದ್ದರು. ಇದೇ ಸಂದರ್ಭ ಬಾರಕೂರು ಶ್ರೀ ಕಾಳಿಕಾಂಬಾ ದೇಗುಲ, ಕಟಪಾಡಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇಗುಲ, ಬಾರಕೂರು ಶ್ರೀಪ್ರಭ ಮಹಿಳಾ ಬಳಗ, ಕೋಟ ವಿರಾಟ್ ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಂಘ ಸಾಲಿಗ್ರಾಮ, ವಿಶ್ವಜ್ಯೋತಿ ಮಹಿಳಾ ಮಂಡಳಿ ಸಾಲಿಗ್ರಾಮ ಮೊದಲಾದವರು ಗೌರವ ಸಮರ್ಪಣೆ ನೆರವೇರಿಸಿದರು. ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸ್ಥಳೀಯ ಕಾರ್ಯಕರ್ತರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕೊಡಂಕೂರು ಶಿವಾನಂದ ಗುಣಾಚಾರಿ ಬಳಗದವರಿಂದ ಭಜನೆ ಸೇವೆ ನೆರವೇರಿತು. ಅಲೆವೂರು ಯೋಗೀಶ್ ಆಚಾರ್ಯ ಸ್ವಾಗತಿಸಿದರು. ಬಿ.ಎ. ಆಚಾರ್ಯ ಪ್ರಸ್ತಾವನೆಗೈದರು. ಅಜಿತ್ ಶರ್ಮ ಮತ್ತು ದೇವರಾಜಮೂರ್ತಿ ಕೊಡಂಕೂರು ಕಾರ್ಯಕ್ರಮ ನಿರೂಪಿಸಿದರು. ವಿದ್ಯಾಪೀಠದ ಪ್ರಾಂಶುಪಾಲ ಶ್ರೀಧರ ಭಟ್ ವಂದಿಸಿದರು.