Home ಧಾರ್ಮಿಕ ಸುದ್ದಿ ಕೊಡಮಣಿತ್ತಾಯ ದೈವದ ದರ್ಶನ ಸೇವೆ

ಕೊಡಮಣಿತ್ತಾಯ ದೈವದ ದರ್ಶನ ಸೇವೆ

1373
0
SHARE

ಪುಂಜಾಲಕಟ್ಟೆ : ಬಂಟ್ವಾಳ ತಾ| ವಾಮದಪದವು ಸಮೀಪದ ಅಜ್ಜಿಬೆಟ್ಟು ಗ್ರಾಮದ ನೀಲಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಕೊಡಮಣಿತ್ತಾಯ, ಬ್ರಹ್ಮ ಬೈದರ್ಕಳ ಮತ್ತು ಕಲ್ಕುಡ-ಕಲ್ಲುರ್ಟಿ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಪ್ರಯುಕ್ತ ಕೊಡಮಣಿತ್ತಾಯ ದೈವದ ದರ್ಶನ ರವಿವಾರ ನಡೆಯಿತು.

ಪೆಜಕ್ಕಳ ಗಂಗಾಧರ ಕಕೃಣ್ಣಾಯ ಅವರ ನೇತೃತ್ವ ಹಾಗೂ ಪೆಜಕ್ಕಳ ರಾಧಾಕೃಷ್ಣ ಕಕೃಣ್ಣಾಯ ಅವರ ಸಹಕಾರದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಮಧ್ಯಾಹ್ನ ಕೊಡಮಣಿತ್ತಾಯ ದೈವಕ್ಕೆ ದರ್ಶನ ಸೇವೆ, ಸಂಜೆ ಧ್ವಜಾರೋಹಣ, ರಾತ್ರಿ ವಿಷ್ಣುಮೂರ್ತಿ ದೈವದ ನೇಮ, ದೇವರ ಬಲಿ ನಡೆಯಿತು.

ಇಂದು ಬ್ರಹ್ಮ ಬೈದರ್ಕಳ ನೇಮ
ಮೇ 15 ರಂದು ಸಂಜೆ ಬ್ರಹ್ಮ ಬೈದರ್ಕಳ ನೇಮ, ರಾತ್ರಿ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರಿಂದ “ಅಂಚಗೆ ಇಂಚಗೆ’ ತುಳು ನಾಟಕ, ಬಾಲ ಕಲಾವಿದೆ ಪ್ರಾಪ್ತಿ ಗಟ್ಟಿ ಬಸ್ತಿಕೋಡಿ ಇವರಿಂದ ಭರತನಾಟ್ಯ ನಡೆಯಲಿದೆ.

LEAVE A REPLY

Please enter your comment!
Please enter your name here