ಮಹಾನಗರ: ಶ್ರೀ ಅಯ್ಯಪ್ಪ ಸ್ವಾಮಿ ಪೂಜಾ ಸೇವಾ ಸಮಿತಿಯ ಆಶ್ರಯದಲ್ಲಿ ಕಾವೂರಿನ ಕುದುರೆಮುಖ ಉಪನಗರದಲ್ಲಿ ಚಿಲಿಂಬಿ ಸಾಯಿಬಾಬಾ ಮಂದಿರದ ಅರ್ಚಕ ಸುನಿಲ್ ಭಟ್ ನೇತೃತ್ವದಲ್ಲಿ ಅಯ್ಯಪ್ಪ ಸ್ವಾಮಿ ವ್ರತಧಾರಿ ಗಳಿಂದ 40ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಪೂಜೆ ನೆರವೇರಿತು.
ಗಣಪತಿ ಹೋಮ ಜರಗಿತು. ಕಾರ್ಯಕ್ರಮವನ್ನು ಕೆ.ಐ.ಒ.ಸಿ.ಎಲ್ ಸಂಸ್ಥೆಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಎಂ. ಜಯ ಶಂಕರ್ ಉದ್ಘಾಟಿಸಿದರು.
ಮುರಳೀಧರ ಭಟ್, ಸುರೇಶ್ ನಾಯಕ್ ಮತ್ತು ಬಳಗ, ಹೊನ್ನಾವರ ಹಾಗೂ ಭಗವತಿ ಮಹಿಳಾ ಭಜನ ಮಂಡಳಿ ಕಾವೂರು ಅವರಿಂದ ಅಯ್ಯಪ್ಪ ಸ್ವಾಮಿ ಭಕ್ತಿರಸಮಂಜರಿ ನಡೆಯಿತು. ಮಹಾ ಮಂಗಳಾರತಿಯ ಬಳಿಕ ಸಾರ್ವ ಜನಿಕರಿಗೆ ಅನ್ನಸಂತರ್ಪಣೆ ಜರಗಿತು.