Home ಧಾರ್ಮಿಕ ಸುದ್ದಿ ಕಿನ್ನಿಮೂಲ್ಕಿ ಕನ್ನರ್ಪಾಡಿ ಶ್ರೀ ಶಾರದಾ ಮಹೋತ್ಸವ

ಕಿನ್ನಿಮೂಲ್ಕಿ ಕನ್ನರ್ಪಾಡಿ ಶ್ರೀ ಶಾರದಾ ಮಹೋತ್ಸವ

748
0
SHARE

ಉಡುಪಿ : ಕಿನ್ನಿಮೂಲ್ಕಿ ಕನ್ನರ್ಪಾಡಿ ಶ್ರೀಶಾರದಾ ಮಹೋತ್ಸವ ಸಮತಿಯ ಪ್ರಥಮ ವರ್ಷದ ತೃತೀಯ ದಿನದ ಕಾರ್ಯಕ್ರಮವಾಗಿ ಸಾಮೂಹಿಕ ವಿದ್ಯಾರ್ಜನೆ ಸೇವೆಯು ಅ. 17ರಂದು ಜರಗಿತು. ಇದರಲ್ಲಿ ನೂರಕ್ಕೂ ಮಿಕ್ಕಿ ಸ್ಥಳೀಯ ವಿದ್ಯಾರ್ಥಿಗಳು ಪಾಲ್ಗೊಂಡರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ರಾತ್ರಿ ಅಭಿನಯ ಕಲಾವಿದರು ತುಳು ಹಾಸ್ಯ ನಾಟಕ “ಬರಂದೆ ಕುಲ್ಲಯೆ’ ಪ್ರದರ್ಶನ ನಡೆಯಿತು.

ಅ. 18ರಂದು ಚಂಡಿಕಾಯಾಗ ವಿಜೃಂಭಣೆಯಿಂದ ಜರಗಿತು. ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು. ಶಾಸಕ ಕೆ.ರಘುಪತಿ ಭಟ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶಪಾಲ್‌ ಸುವರ್ಣ ಮೊದಲಾದವರು ಆಗಮಿಸಿದ್ದರು. ಸಂಜೆ ಶಾರದಾ ದೇವಿಯ ವಿಸರ್ಜನೆ ಮೆರವಣಿಗೆಯಲ್ಲಿ ಮಹಿಳಾ ಚಂಡೆ ಬಳಗ, ಕೇರಳ ಶೈಲಿಯ ಚಂಡೆ, ಮರಕಾಲು, ಹುಲಿವೇಷ, ಭಜನೆ, ವಿವಿಧ ವೇಷಗಳು, ಟ್ಯಾಬ್ಲೊ, ಸುಡುಮದ್ದು ಪ್ರದರ್ಶನ, ಬಿರುದಾವಳಿಗಳ ತಂಡ ಭಾಗವಹಿಸಿದ್ದವು.

ಶೋಭಾಯಾತ್ರೆ ನಗರದಲ್ಲಿ ಸಂಚರಿಸಿ ಕನ್ನರ್ಪಾಡಿ ಶ್ರೀ ಜಯದುರ್ಗಾ ಪರಮೇಶ್ವರಿ ದೇವಸ್ಥಾನದ ಕಣ್ವ ಪುಷ್ಕರಣಿ ಸರೋವರದಲ್ಲಿ ಜಲಸ್ತಂಭನಗೊಳಿಸಲಾಯಿತು.

LEAVE A REPLY

Please enter your comment!
Please enter your name here