Home ಧಾರ್ಮಿಕ ಸುದ್ದಿ ಕಿನ್ನಿಮಜಲು ಶ್ರೀ ಬ್ರಹ್ಮಬೈದರ್ಕಳ ನೇಮ

ಕಿನ್ನಿಮಜಲು ಶ್ರೀ ಬ್ರಹ್ಮಬೈದರ್ಕಳ ನೇಮ

786
0
SHARE

ಬಡಗನ್ನೂರು : ಕುರಿಯ ಗ್ರಾಮದ ಕಿನ್ನಿಮಜಲು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಶ್ರೀ ಬ್ರಹ್ಮಬೈದರ್ಕಳ ನೇಮ ಫೆ.
23ರಂದು ನಡೆಯಿತು.

ಬೆಳಗ್ಗೆ ಸ್ಥಳ ಶುದ್ಧಿ, ಗಣಪತಿ ಹೋಮ, ಬ್ರಹ್ಮದೇವರ ತಂಬಿಲ, ಕೋಟಿ ಚೆನ್ನಯರಿಗೆ ತಂಬಿಲ ನಡೆದು ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಸಂಜೆ ಭಂಡಾರ
ತೆಗೆಯುವ ಕಾರ್ಯಕ್ರಮ ನಡೆದು ಬಳಿಕ ಅನ್ನಸಂತರ್ಪಣೆ ನಡೆದು ರಾತ್ರಿ ಬೈದೇರುಗಳ ಗರಡಿ ಇಳಿಯುವ ಕಾರ್ಯಕ್ರಮ ನಡೆಯಿತು. ಬಳಿಕ ಮಾಯಂದಾಲ್‌ (ಮಾಣಿಬಾಲೆ) ಗರಡಿ ಇಳಿಯುವ ಕಾರ್ಯಕ್ರಮ ನಡೆದು ಕೋಟಿ ಚೆನ್ನಯರ ದರ್ಶನ ಪಾತ್ರಿಗಳ ಸೇಟ್‌, ಬೈದೇರುಗಳ ಸೇಟ್‌ ನಡೆದು ಅರುಣೋದಯಕ್ಕೆ ಪ್ರಸಾದ ವಿತರಣೆ ನಡೆಯಿತು.

ಗರಡಿಯ ಆಡಳಿತ ಮೊಕ್ತೇಸರ ಗಿರಿಯಪ್ಪ ಪೂಜಾರಿ, ಸತೀಶ್‌ ಪೂಜಾರಿ ಕಿನ್ನಿಮಜಲು, ಶಶಿಧರ್‌ ಕಿನ್ನಿಮಜಲು ಹಾಗೂ ಊರಿನವರು ಉಪಸ್ಥಿತರಿದ್ದರು. ತುಳುವೆರೆ ತುಡರ್‌ ಕಲಾತಂಡ ಸುರತ್ಕಲ್‌ ಇವರಿಂದ “ಕೊಪ್ಪರಿಗೆ’ ತುಳುನಾಟಕ ಪ್ರದರ್ಶನಗೊಂಡಿತು.

LEAVE A REPLY

Please enter your comment!
Please enter your name here