ಮೂಲ್ಕಿ: ದೇವಸ್ಥಾನ ಮತ್ತು ದೈವಸ್ಥಾನಗಳು ಅಭಿವೃದ್ಧಿಯಾದಾಗ ಸಮೃದ್ದಿಯ ವಾತಾವರಣ ನಿರ್ಮಾಣವಾ ಗುತ್ತದೆ ಎಂದು ಮೂಲ್ಕಿ ಬಪ್ಪನಾಡು ದೇವಸ್ಥಾನದ ಆಡಳಿತ ಮೊಕ್ತೇಸರ ಎನ್.ಎಸ್. ಮನೋಹರ ಶೆಟ್ಟಿ ಹೇಳಿದರು. ಅವರು ಕಿಲ್ಪಾಡಿಯ ಶ್ರೀ ಕೋಡ್ದಬ್ಬು ದೈವಸ್ಥಾನದ ಪುನರ್ನಿರ್ಮಾಣಕ್ಕೆ ರವಿವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ದೈವಸ್ಥಾನದ ಗುರಿಕಾರ ವೆಂಕಪ್ಪ ಬಿ. ಅಧ್ಯಕ್ಷತೆ ವಹಿಸಿದ್ದರು. ಬಾರ್ಕೂರು ಕಚ್ಚಾರ ಮಾಲ್ದಿ ದೈವಸ್ಥಾನದ ಗೌರವಾಧ್ಯಕ್ಷ ಚೆನ್ನಪ್ಪ ಬಿ. ಮೂಲ್ಕಿ, ಒಂಬತ್ತು ಮಾಗಣೆ ಮುಂಡಾಲ ಸಮಾಜದ ಅಧ್ಯಕ್ಷ ಯಶವಂತ ಐಕಳ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಿನಾಥ ಪಡಂಗ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ರಂಜನ್ ಶೆಟ್ಟಿ, ಮೂಲ್ಕಿ ನ.ಪಂ.ನ ನಿವೃತ್ತ ಮುಖ್ಯಾಧಿಕಾರಿ ಹರಿಶ್ಚಂದ್ರ ಪಿ. ಸಾಲ್ಯಾನ್, ಸಿಂಡಿಕೇಟ್ ಬ್ಯಾಂಕ್ನ ಮ್ಯಾನೇಜರ್ ಎಂ.ಅಶೋಕ್ ಕುಮಾರ್ ಶೆಟ್ಟಿ, ನಿವೃತ್ತ ಸೇನಾನಿ ಮಾಧವ ಪೂಜಾರಿ, ಕಿಲ್ಪಾಡಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಮಹೇಶ್ ಅಮೀನ್, ದೇವರಾಜ್ ಶೆಟ್ಟಿ, ಬಾಬು ಶೆಟ್ಟಿ ಬಂಡಸಾಲೆ, ಪ್ರಕಾಶ್ ದೇವಾಡಿಗ, ಉಪೇಂದ್ರ ಆಚಾರ್ಯ, ಎಂಜಿನಿಯರ್ ರಮೇಶ್ ಪಾಲ್, ರಂಗ ಕೋಟ್ಯಾನ್ ಮೊದಲಾದವರು ಅತಿಥಿಗಳಾಗಿದ್ದರು.
ಸಮಿತಿಯ ವತಿಯಿಂದ ಗೌರವ ಡಾಕ್ಟರೆಟ್ ಪಡೆದಿರುವ ಹರಿಶ್ಚಂದ್ರ ಪಿ. ಸಾಲ್ಯಾನ್ ಅವರನ್ನು ಗೌರವಿಸಲಾಯಿತು. ವೇ|ಮೂ| ಕಿಲ್ಪಾಡಿ ನಾರಾಯಣ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು. ದೈವಸ್ಥಾನದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಶಿವರಾಮ ಸ್ವಾಗತಿಸಿ, ಸತೀಶ್ ಕಿಲ್ಪಾಡಿ ವಂದಿಸಿದರು.